ಸುಕ್ಮಾ: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ ಇಂದೂ ಮುಂದುವರಿದಿದ್ದು, ಇಲ್ಲಿನ ಸುಕ್ಮಾ ಜಿಲ್ಲೆಯ ಕಿರಂದೂಲ್ ಗ್ರಾಮದ ಬಳಿ ಸುಮಾರು 5 ಕಿ ಮೀಟರ್‌ಗೂ ಅಧಿಕವಾದ ರೈಲು ಮಾರ್ಗವನ್ನು ಸ್ಫೋಟಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಇಲ್ಲಿನ ಮರೇಂಗಾ ಗ್ರಾಮದ 500ಕ್ಕೂ ಹೆಚ್ಚು ನಾಗರೀಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ನಕ್ಸಲರು ಇಂದು ಈ ಕೃತ್ಯ ಎಸಗಿದ್ದಾರೆ.
ಈ ಸಂಬಂಧ ಈಗಾಗಲೇ ಬಂಧನ ಕಾರ್ಯಾಚರಣೆ ನಡೆಸಿರುವ ಪುಣೆಯ ನಕ್ಸಲ್ ನಿಗ್ರಹ ತಂಡದ ಅಧಿಕಾರಿಗಳು ಮುರಳೀಧರನ್ ಎಂಬ ನಕ್ಸಲ್ ನಾಯಕ ಹಾಗೂ ಆತನ ಸಹಚರರನ್ನು ಬಂಧಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲೆಯಲ್ಲಿ ಯಾವುದೇ ರೀತಿಯ ನಕ್ಸಲ್ ಕೃತ್ಯ ನಡೆದಿಲ್ಲ. ಇಲಾಖೆ ಎಲ್ಲಾ ರೀತಿಯ ಭದ್ರತೆಯನ್ನು ಕೈಗೊಂಡಿದ್ದು, ಪ್ರಧಾನಿ ಮೋದಿ ಅವರಿಗೆ ಸೂಕ್ತ ಭದ್ರತೆ ಕಲ್ಪಿಸಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಮಾವೋವಾದಿಗಳಿಂದ ಯಾವುದೇ ಕೃತ್ಯ ನಡೆದಿಲ್ಲ ಎನ್ನುವ ಮೂಲಕ ನಕ್ಸಲರ ಅಟ್ಟಹಾಸವನ್ನು ತಳ್ಳಿ ಹಾಕಿದ್ದಾರೆ.
