ರಾಷ್ಟ್ರೀಯ

3.81 ಲಕ್ಷ ಜೈಲು ವಾಸಿಗಳ ಪೈಕಿ 2.5 ಲಕ್ಷ ಮಂದಿ ವಿಚಾರಾಣಾಧೀನ ಖೈದಿಗಳು..!

Pinterest LinkedIn Tumblr

India-Jails

ನವದೆಹಲಿ, ಮೇ 8: ದೇಶದ ವಿವಿಧ ಜೈಲುಗಳಲ್ಲಿ 3.81 ಲಕ್ಷ ಮಂದಿ ಸೆರೆವಾಸ ಅನುಭವಿಸುತ್ತಿದ್ದು, ಈ ಪೈಕಿ 2.54 ಲಕ್ಷ ಮಂದಿ ವಿಚಾರಣಾಧೀನ ಖೈದಿಗಳಿದ್ದಾರೆ ಎಂಬ ಅಂಶವನ್ನು ಕೇಂದ್ರ ಸರ್ಕಾರದ ಸಮೀಕ್ಷೆಗಳು ಬಹಿರಂಗಪಡಿಸಿವೆ. 3.81 ಲಕ್ಷ ಮಂದಿ ಪೈಕಿ ಕೇವಲ 1.27 ಲಕ್ಷ ಮಂದಿ ಅಪರಾಧಿಗಳು ಶಿಕ್ಷೆಗೆ ಗುರಿಯಾಗಿದ್ದು, ಉಳಿದವರ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಅವರು ಹಲವಾರು ವರ್ಷಗಳಿಂದ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ.

ಪ್ರಥಮ ಮಾಹಿತಿ ವರದಿ ಮೇಲೆ ಶಿಕ್ಷೆಗೊಳಪಟ್ಟು ವಿಚಾರಣಾಧೀನ ಕೈದಿಗಳಾಗಿರುವವರನ್ನು ಶಿಕ್ಷೆಯ ಅರ್ಧದಷ್ಟು ಸೆರೆಮನೆ ವಾಸ ಅನುಭವಿಸಿದ್ದರೆ ಅಂತಹವರನ್ನು ಬಿಡುಗಡೆಗೊಳಿಸುವಂತೆ ಗೃಹ ಇಲಾಖೆಗೆ ಸೂಚಿಸಿದೆ. ಆದರೂ ಸಣ್ಣಪುಟ್ಟ ಅಪರಾಧವೆಸಗಿ ಜೈಲು ಪಾಲಾಗಿರುವ ಲಕ್ಷಾಂತರ ಮಂದಿ ಜಾಮೀನು ಪಡೆಯಲು ಸಾಧ್ಯವಾಗದೆ ತಮಗೆ ನೀಡಿದ ಶಿಕ್ಷೆಗಿಂತಲೂ ಹೆಚ್ಚಿನ ಅವಧಿಯನ್ನು ಜೈಲಿನಲ್ಲೇ ಕಳೆಯುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಇಲಾಖೆ ರಾಜ್ಯಗಳ ಗೃಹ ಇಲಾಖೆ ಮತ್ತು ಹೈಕೋರ್ಟ್‌ಗಳಿಗೆ ಆದೇಶ ನೀಡಿದ್ದು, ಕೂಡಲೇ ಇಂಥವರನ್ನು ಗುರುತಿಸಿ ವರದಿ ನೀಡುವಂತೆ ಸೂಚಿಸಿದೆ.

ಈ ಬಗ್ಗೆ ಕೂಡಲೇ ಯಾವುದೇ ಕ್ರಮಗಳನ್ನೂ ಜರುಗಿಸಲಾಗಿಲ್ಲ ಎಂಬ ಕೂಗು ದೇಶದ ಎಲ್ಲೆಡೆ ಎದ್ದಿದ್ದು, ನಿರಪರಾಧಿಗಳು ಸಹ ಜೈಲಿನಲ್ಲಿ ವಿನಾಕಾರಣ ಶಿಕ್ಷೆ ಅನುಭವಿಸುತ್ತಿದ್ದು, ಅಂತಹವರನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇನ್ನು ಕೆಲವರು ಯಾವುದೇ ಅಪರಾಧ ಎಸಗದಿದ್ದರೂ ಸಾಕ್ಷಿಗಳ ಕೊರತೆ ಮತ್ತು ನಾಶದಿಂದ ಪ್ರಥಮ ಮಾಹಿತಿ ವರದಿ ಆಧಾರದ ಮೇಲೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಅಂತಹವರ ಪೈಕಿ ಸಾಕಷ್ಟು ಮಂದಿ ಜಾಮೀನು ಪಡೆಯಲಾಗದಷ್ಟು ನಿಶ್ಯಕ್ತರಾಗಿದ್ದಾರೆ. ಹಾಗಾಗಿ ಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಕೂಡಲೇ ಇತ್ಯರ್ಥಗೊಳಿಸುವಂತೆಯೂ ಸುಪ್ರೀಂಕೋರ್ಟ್ ಆದೇಶಿಸಿದೆ.

Write A Comment