ಮಂಗಳೂರು,ಮೇ.08: ಬರಹ, ಚಿಂತನೆ ಹಾಗೂ ದಾಸ ಸಾಹಿತ್ಯಗಳ ಸಂಶೋಧನೆ ಮೂಲಕ ವಿಶೇಷ ಸಾಧನೆಗೈದು ಪ್ರಸ್ತುತ ಬೆಂಗಳೂರಿನಲ್ಲಿ ಸಾಹಿತ್ಯ, ಸಾಂಸ್ಕೃತಿಕ ಸೇವೆ ಗೈಯ್ಯುತ್ತಿರುವ ಡಾ. ಮಾಧವ ಉಡುಪರು ಇತ್ತೀಚೆಗೆ ಹಂಪಿ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿ ಪುರಸ್ಕೃತರು. ಈ ಹಿಂದೆ ವಿವೇಕ ಸಂಪದ ಪತ್ರಿಕೆಯ ಸಂಪಾದಕರಾಗಿಯೂ ಸಾಹಿತ್ಯಕ್ಕೆ ತನ್ನದೆ ಆದ ಕೊಡುಗೆ ನೀಡಿರುವರು.
ಸಾಲಿಗ್ರಾಮದ ಡಾ. ಮಾಧವ ಉಡುಪ ಅವರಿಗೆ ಮೇ.೯ ರಂದು ಶನಿವಾರ ಉಡುಪಿ ಚಕ್ರತೀರ್ಥದಲ್ಲಿ ನಡೆಯಲಿರುವ ನಡ್ಡಂತಿಲ್ಲಾಯ ನಾಗಬನದ ಸಪ್ತಮ ಪುನಃ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮದಲ್ಲಿ ಪೂಜ್ಯ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಕಲ್ಕೂರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
