ಕನ್ನಡ ವಾರ್ತೆಗಳು

ದ.ಕ. ಜಿಲ್ಲೆಯಲ್ಲಿ ಎ.30ರಂದು ಖಾಸಗಿ ಬಸ್‌ ನೌಕರ ಮುಷ್ಕರ.

Pinterest LinkedIn Tumblr

bus

ಮಂಗಳೂರು,ಎಪ್ರಿಲ್ .29 : ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ `ರಸ್ತೆ ಸುರಕ್ಷತಾ ಮಸೂದೆ’ ವಿರೋಧಿಸಿ ಏ.30ರಂದು ವಿವಿಧ ಕಾರ್ಮಿಕ ಸಂಘಟನೆಗಳ ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಮೋಟಾರ್‌ ಟ್ರಾನ್ಸ್‌ಪೊರ್ಟ್‌ ಆ್ಯಂಡ್‌ ಎಂಜಿನಿಯರಿಂಗ್‌ ವರ್ಕರ್ಸ್‌ ಯೂನಿಯನ್‌ ಹಾಗೂ ಸಿಐಟಿಯು ಬಸ್‌ ನೌಕರರ ಸಂಘ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.

ಅಪಘಾತ ಹಾಗೂ ಇನ್ನಿತರ ಸಣ್ಣಪುಟ್ಟ ಘಟನೆಗಳು ನಡೆದ ಸಂದರ್ಭ ಸಾರಿಗೆ ರಂಗದಲ್ಲಿ ದುಡಿಯುವ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಜೈಲು ಶಿಕ್ಷೆಯನ್ನು ಖಾತರಿ ಮಾಡಿರುವ ಕಾಯಿದೆಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಹಾಗೂ ಕರಾವಳಿ ಜಿಲ್ಲೆಯ ಖಾಸಗಿ ಬಸ್‌ ಮಾಲಕರು ಬಸ್‌ಗಳಲ್ಲಿ ದುಡಿಯುವ ಚಾಲಕರು ಮತ್ತು ನಿರ್ವಾಹಕರಿಗೆ ನೀಡಲು ಒಪ್ಪಿರುವ ದಿನ ವೇತನವನ್ನು ಜಾರಿ ಮಾಡಲು ಮೀನಮೇಷ ಎಣಿಸುತ್ತಿರುವುದನ್ನು ವಿರೋಧಿಸಿ ಮುಷ್ಕರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ವಿವಿಧ ಕಾರ್ಮಿಕ ಸಂಘಟನೆಗಳು ಅಖೀಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು ಯೂನಿಯನ್‌ ಸಂಪೂರ್ಣ ಬೆಂಬಲ ಘೋಷಿಸಿದೆ. ಕರಾವಳಿ ಜಿಲ್ಲೆಯ ಖಾಸಗಿ ಬಸ್‌ಗಳಲ್ಲಿ ದುಡಿಯುತ್ತಿರುವ ಚಾಲಕರು ಹಾಗೂ ನಿರ್ವಾಹಕರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ ಎಂದು ಯೂನಿಯನ್‌ ಪ್ರ. ಕಾರ್ಯದರ್ಶಿ ವಸಂತ ಆಚಾರಿ ಹಾಗೂ ಸಿಐಟಿಯು ಬಸ್‌ ನೌಕರರ ಸಂಘದ ಅಧ್ಯಕ್ಷ ಅಶೋಕ್‌, ಕಾರ್ಯದರ್ಶಿ ವಿಶ್ವನಾಥ ಕುಲಾಲ್‌ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಂದ್ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದ್ದು, ಇದಕ್ಕೆ ಸಂಘಟನೆಗಳೂ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದರು. ಕೇಂದ್ರ ಸರ್ಕಾರದ `ರಸ್ತೆ ಸುರಕ್ಷತಾ ಮಸೂದೆ’ ವಿರೋಧಿಸಿ ಸಾರಿಗೆ ಇಲಾಖೆಯ ನೌಕರರ ಸಂಘಟನೆಗಳ ಸೇರಿದಂತೆ ಎಡಪಂಥೀಯ ಸಂಘಟನೆಗಳು ರಾಷ್ಟ್ರ ವ್ಯಾಪ್ತಿ ಏ.30ರಂದು 14 ತಾಸುಗಳು ಬಂದ್‍ಗೆ ಕರೆ ನೀಡಿವೆ.

Write A Comment