ರಾಷ್ಟ್ರೀಯ

ಪತ್ನಿ ಕಾಟ: ಮಹಿಳಾ ಸಹಾಯವಾಣಿ ಮೊರೆ ಹೋಗುತ್ತಿರುವ ಗಂಡಂದಿರು

Pinterest LinkedIn Tumblr

call

ಗಾಂಧೀನಗರ್: ದೌರ್ಜನ್ಯವನ್ನೆದುರಿಸುತ್ತಿರುವ, ಸಮಸ್ಯೆಗೆ ಸಿಲುಕಿರುವ ಸ್ತ್ರೀಯರ ರಕ್ಷಣೆಗೆ ಮಹಿಳಾ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಎಲ್ಲ  ರಾಜ್ಯಗಳಲ್ಲಿ ಈ ವ್ಯವಸ್ಥೆಯಿದ್ದು ಗುಜರಾತಿನಲ್ಲಿ ಮಹಿಳೆಯರಿಗಾಗಿ ಅಭಯಮ್ ಸಹಾಯವಾಣಿ (181) ಕಾರ್ಯನಿರ್ವಹಿಸುತ್ತಿದೆ. ಆಶ್ಚರ್ಯಕರವಾದ ಸಂಗತಿ ಏನೆಂದರೆ ಕಳೆದ ಕೆಲ ತಿಂಗಳಿಂದ  ಈ ನಂಬರ್‌ಗೆ ಕರೆ ಮಾಡುವವರಲ್ಲಿ 25% ಪುರುಷರಂತೆ.

ತಮ್ಮ ಮೇಲೆ ಕೌಟುಂಬಿಕ ಹಿಂಸೆಯಾಗುತ್ತಿದೆ ಎಂದು ದೂರು ನೀಡಲು ಕೆಲ ಗಂಡಂದಿರು ಮಹಿಳಾ ಸಹಾಯವಾಣಿಗೆ ಕೆಲ ಪತಿಯಂದಿರು ದೂರುತ್ತಿದ್ದಾರೆ.

ಅಭಯಮ್ ಪ್ರಾಜೆಕ್ಟ್ ಮುಖ್ಯಸ್ಥರಾದ ನರೇಂದ್ರ ಸಿಂಗ್ ಗೋಹಿಲ್ ಪ್ರಕಾರ ಪತ್ನಿಯರ ವಿರುದ್ಧ ಹಿಂಸೆ ನೀಡಿದ ಆರೋಪ ಹೊರಿಸುವ ಪುರುಷರು ಹೇಳಿಕೊಳ್ಳುವ ಸಮಸ್ಯೆ ಏನೆಂದರೆ ತಮ್ಮ ಆರ್ಥಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ದುಬಾರಿ ವಸ್ತುಗಳನ್ನು ಡಿಮಾಂಡ್ ಮಾಡುತ್ತಾರೆ. ಈ ಕಾರಣಕ್ಕೆ ಮನೆಯಲ್ಲಿ ಸದಾ ಜಗಳಗಳು ನಡೆಯುತ್ತವೆ.

ಕಳೆದ ಡಿಸೆಂಬರ್ ತಿಂಗಳಿಂದ ಈ ರೀತಿ ಪುರುಷರು ಸಹಾಯ ಅಪೇಕ್ಷಿಸಿ ಕರೆ ಮಾಡುವುದು ಪ್ರಾರಂಭವಾಗಿದ್ದು, ಆ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂದು ಗೋಹಿಲ್ ತಿಳಿಸಿದ್ದಾರೆ.

Write A Comment