ರಾಷ್ಟ್ರೀಯ

ಮುಸ್ಲಿಮರು ದೇವಾಲಯ ಸ್ಥಾಪಿಸುವುದರ ವಿರುದ್ಧ ಫತ್ವಾ ಹೊರಡಿಸಿದ ಇಸ್ಲಾಮಿಕ್ ಸಂಘಟನೆ

Pinterest LinkedIn Tumblr

Eid-2014-Across-Nation-PTI

ಲಕನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರಿಗೆ ದೇವಾಲಯ ನಿರ್ಮಿಸಬೇಕೆಂದಿರುವ ಉತ್ತರ ಪ್ರದೇಶದ ಸಚಿವ ಅಜಮ್ ಖಾನ್ ಅವರ ಹೇಳಿಕೆಗೆ ಅಡ್ಡಿಯಾಗಿ ಪರಿಣಮಿಸಿರುವ ಇಸ್ಲಾಮಿಕ್ ಸಂಘಟನೆಯೊಂದು ಮುಸ್ಲಿಮನೊಬ್ಬನ  ಈ ನಡೆ ಇಸ್ಲಾಂ ವಿರೋಧಿ ಮತ್ತು ‘ನ್ಯಾಯಬಾಹಿರ’ ಎಂದು ಫತ್ವಾ ಹೊರಡಿಸಿದ್ದಾರೆ.

“ಇಸ್ಲಾಂನಲ್ಲಿ ಅಲ್ಲಾಹುನನ್ನು ಹೊರತುಪಡಿಸಿ ಬೇರೆಯವರನ್ನು ನಂಬುವುದು ನ್ಯಾಯಬಾಹಿರ ಮತ್ತು ದೇವಾಲಯವನ್ನು ಕಟ್ಟುವುದು ಕೂಡ ಅಷ್ಟೇ ತಪ್ಪು” ಎಂದು ಮಾದರಸ ಮಂಜರ್ ಎ ಇಸ್ಲಾಂ ತಿಳಿಸಿದೆ.

“ದೇವಾಲಯವನ್ನು ಕಟ್ಟುವ ಮುಸ್ಲಿಂ ಚಟುವಟಿಕೆಗಳು ಸರಿಯಲ್ಲ. ಅವನು ಅಪರಾಧಿ ಮತ್ತು ಅವನ್ನು ಶಿಕ್ಷಿಸಲಾಗುತ್ತದೆ. ಅವನಿಗೆ ಪತ್ನಿಯಿದ್ದರೆ ವಿಷಾದ ವ್ಯಕ್ತಪಡಿಸಿ ಅವರನ್ನು ಮತ್ತೆ ಮದುವೆಯಾಗಬೇಕಾಗುತ್ತದೆ.” ಎಂದು ಮದರಸಾದ ಫತ್ವಾ ಇಲಾಖೆ ತಿಳಿಸಿದೆ.

“ನಾನು ನೇತಾಜಿ (ಮುಲಾಯಂ) ಅವರ ಮುಂದೆ ಅವರ ದೇವಾಲಯ ನಿರ್ಮಿಸಲು ನನ್ನ ಪ್ರಸ್ತಾವನೆ ಸಲ್ಲಿಸುತ್ತೇನೆ. ಅವರು ಅನುಮತಿ ನೀಡಿದರೆ ಅದನ್ನು ನಿರ್ಮಿಸಲಾಗುವುದು” ಎಂದು ಅಜಮ್ ಫೆಬ್ರವರಿ ೧೨ ರಂದು ಹೇಳಿದ್ದರು.

Write A Comment