ಪೇಶಾವರ್: ತಾಲಿಬಾನ್ ಉಗ್ರರ ಉಪಟಳ ಹೆಚ್ಚಾಗಿರುವ ಪಾಕಿಸ್ತಾನದ ಪೇಶಾವರ್ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ ಮೆಹಮೂದ್ ಜಾಫ್ರಿ, ಕರ್ತವ್ಯಕ್ಕೆ ತೆರಳುವ ಮುನ್ನ ತಮ್ಮ ಕಾರಿನಲ್ಲಿ ಮೊದಲ ಇಡುವುದು ಎಕೆ-47 ರೈಫಲ್ ನಂತರ ಸ್ಟೋತೋಸ್ಕೋಪ್. ಸಶಸ್ತ್ರಧಾರಿಗಳ ಬೆಂಗಾವಲಿನೊಂದಿಗೆ ಆಸ್ಪತ್ರೆಗೆ ತೆರಳುವಂತಹ ಸ್ಥಿತಿ ಎದುರಾಗಿದೆ.
ಒಂದು ಬಾರಿ ಹತ್ಯಾಯತ್ನ ಹಾಗೂ ಅಪಹರಣದಿಂದ ಪಾರಾಗಿರುವ ಜಾಫ್ರಿ, ವೈಯಕ್ತಿಕ ಸುರಕ್ಷತೆಗಾಗಿ ಹೆಚ್ಚಿನ ಆದ್ಯತೆ ನೀಡುತ್ತಾರೆ. ಪೇಶಾವರ್ದಲ್ಲಿ ಇಲ್ಲಿಯವರೆಗೆ ಹಲವಾರು ವೈದ್ಯರ ಹತ್ಯೆಯಾಗಿವೆ. ವೈದ್ಯರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆಯಿಡುವ ತಾಲಿಬಾನ್ ಉಗ್ರರ ಗ್ಯಾಂಗ್ಗಳು ಇಲ್ಲಿ ಸಕ್ರಿಯವಾಗಿವೆ.
ಕಳೆದ ಮೂರು ವರ್ಷಗಳಲ್ಲಿ ಪೇಶವರ್ ನಗರವೊಂದರಲ್ಲಿಯೇ 20ಕ್ಕೂ ಹೆಚ್ಚು ವ್ಯೆದ್ಯರನ್ನು ಹತ್ಯೆ ಮಾಡಲಾಗಿದೆ. 30ಕ್ಕೂ ಹೆಚ್ಚು ವೈದ್ಯರನ್ನು ಅಪಹರಿಸಲಾಗಿದೆ. ಸುಮಾರು 3000 ವೈದ್ಯರು ಶಾಂತಿ ಜೀವನ ಸಾಗಿಲು ಇತರೆ ನಗರಗಳನ್ನು ಅರಸಿ ಹೋಗಿದ್ದಾರೆ.
ಕ್ಲಿನಿಕ್ಗಳಲ್ಲಿ ಗನ್ಗಳು ಸ್ಟೇತೋಸ್ಕೋಪ್ನಂತೆ ಮಹತ್ವದ್ದಾಗಿವೆ. ವೈದ್ಯರು ಉಗ್ರರಿಗೆ ಸುಲಭದ ಟಾರ್ಗೆಟ್ ಆಗಿದ್ದಾರೆ. ವೈದ್ಯರಿಗೆ ಉತ್ತಮ ಸಂಬಳ ದೊರೆಯುತ್ತಿದೆ. ಆದರೆ, ಸುರಕ್ಷತೆಯಿಲ್ಲ. ವೈದ್ಯರು ತಮ್ಮ ಸುರಕ್ಷತೆಯನ್ನು ತಾವೇ ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ ಎಂದು ವೈದ್ಯರ ಸಂಘ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ.
ಎರಡು ಬಾರಿ ಉಗ್ರರಿಂದ ತಪ್ಪಿಸಿಕೊಂಡ ನಾನು ಅದೃಷ್ಠಶಾಲಿಯಾಗಿದ್ದೇನೆ. ಮೂರು ಬಾರಿ ಉಗ್ರರಿಂದ ಹತ್ತಿರದಲ್ಲಿಯೇ ತಪ್ಪಿಸಿಕೊಂಡಿದ್ದೇನೆ ಎಂದು ವೈದ್ಯ ಜಾಫ್ರಿ ಆತಂಕ ವ್ಯಕ್ತಪಡಿಸುತ್ತಾರೆ.
ಹಲವಾರು ವೈದ್ಯರನ್ನು ಉಗ್ರರು ಹತ್ಯೆಗೈದಿದ್ದಾರೆ ಇಲ್ಲವೇ ಅಪಹರಿಸಿದ್ದಾರೆ ಎಂದು ಆರೋಗ್ಯ ಸಚಿವ ಶೆಹರಾಮ್ ಖಾನ್ ತಾರಾಕೈ ತಿಳಿಸಿದ್ದಾರೆ.
