ಕನ್ನಡ ವಾರ್ತೆಗಳು

ಮಿಸ್ಡ್ ಕಾಲ್ ಕೊಟ್ರೆ ಮೊಬೈಲ್‍ಗೆ ಬರುತ್ತೆ ಟ್ವೀಟ್ ಸಂದೇಶ

Pinterest LinkedIn Tumblr

twitter_messgege_dm

ಬೆಂಗಳೂರು,ಮಾರ್ಚ್.25 : ಟ್ವಿಟರ್ ಬಳಕೆದಾರರು ಆನ್‍ಲೈನ್‍ನಲ್ಲಿ ಇಲ್ಲದಿದ್ದರೂ ಬೆಂಗಳೂರು `ಪೊಲೀಸ್ ಕಮೀಷನರ್’ ಹಾಗೂ `ನಗರ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸ್’ ಟ್ವಿಟರ್ ಅಕೌಂಟ್ ನ ಟ್ವಿಟ್ ಸಂದೇಶಗಳನ್ನು ಇನ್ನು ಮುಂದೆ ಮೊಬೈಲ್ ಫೊನ್ ಸಂದೇಶ(ಟೆಕ್ಸ್ಟ್ ಮೆಸೇಜ್) ಮೂಲಕ ಪಡೆದುಕೊಳ್ಳಬಹುದು. ಅದಕ್ಕಾಗಿ ನೀವು, ನಿಮ್ಮ ಮೊಬೈಲ್ ಫೋನ್ ನಂಬರ್‍ನಿಂದ ಒಂದು ಬಾರಿ ಮಿಸ್ ಕಾಲ್ ಕೊಟ್ಟರೆ ಸಾಕು.

ಪ್ರಾರಂಭಿಕವಾಗಿ ಪ್ರಧಾನಿ ಕಚೇರಿ, ವಿದೇಶಾಂಗ ಇಲಾಖೆ, ಭಾರತೀಯ ಸೇನೆ, ಭಾರತೀಯ ರೈಲ್ವೆ, ದೇಶದ 14 ಮುಖ್ಯಮಂತ್ರಿಗಳ ಟ್ವಿಟರ್ ಅಕೌಂಟ್ ಗಳಿಂದ ಸಂದೇಶ ಪಡೆದು ಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಬೆಂಗಳೂರು ಪೊಲೀಸ್ ಕಮೀಷನರ್, ಬೆಂಗಳೂರು ಕಾನೂನು ಸುವ್ಯವಸ್ಥೆ ಪೊಲೀಸ್ ಹಾಗೂ ಬೆಂಗಳೂರು ಟ್ರಾಫಿಕ್ ಪೊಲೀಸ್ ಟ್ವಿಟರ್ ಅಕೌಂಟ್‍ಗಳಿಂದಲೂ ಸಂದೇಶ ಪಡೆಯುವ ವ್ಯವಸ್ಥೆ ಕಲ್ಪಿಸಿರುವುದು ವಿಶೇಷ.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ವಿಟರ್ ಸಿಐಓ ಡಿಕ್ ಕೊಸ್ಟೊಲೊ ಅವರು ಈ ನೂತನ ವ್ಯವಸ್ಥೆಗೆ ಚಾಲನೆ ನೀಡಿದರು. ಪ್ರಮುಖ ವ್ಯಕ್ತಿಗಳು, ಸಂಸ್ಥೆಗಳ ಟ್ವಿಟರ್ ಅಕೌಂಟ್‍ಗಳನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಾರೆ. ತಾವು ಫಾಲೋ ಮಾಡುವ ನಾಯಕರ ಟ್ವಿಟರ್ ಸಂದೇಶಗಳು ಕೆಲವೊಮ್ಮೆ ಆಫ್ ಲೈನ್ ಕಾರಣಕ್ಕೆ ಮಿಸ್ ಆಗುತ್ತವೆ. ಅಲ್ಲದೇ ಹಲವರು ಟ್ವಿಟರ್ ಖಾತೆಯನ್ನೇ ಹೊಂದಿರುವುದಿಲ್ಲ. ಹೀಗಾಗಿ, ಟ್ವಿಟ್‍ಗಳು ಎಲ್ಲರನ್ನೂ ತಲುಪಲೆಂದು ಈ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.

ಪರಿಣಾಮಕಾರಿ ವ್ಯವಸ್ಥೆ ದೂರುಗಳನ್ನು ಸ್ವೀಕರಿಸಲು, ಕಾನೂನು ಸುವ್ಯವಸ್ಥೆ ಬಗ್ಗೆ ದೂರುಗಳು, ಸಂಚಾರ ನಿಯಮ ಉಲ್ಲಂಘನೆ, ಪೊಲೀಸರ ಕರ್ತವ್ಯಗಳ ಬಗ್ಗೆ ಜನರನ್ನು ತಲುಪಲು ಬೆಂಗಳೂರು ಪೊಲೀಸರು ಟ್ವಿಟರ್ ಖಾತೆ ತೆರೆದಿದ್ದು, ಅಭೂತಪೂರ್ವ ಯಶಸ್ಸು ದೊರೆತಿದೆ. ಅಲ್ಲದೇ, ನೊಂದವರು ಎಷ್ಟೋ ಬಾರಿ ಪೊಲೀಸ್ ಠಾಣೆಗೆ ತೆರಳಿದಾಗ ದೂರು ತೆಗೆದು ಕೊಳ್ಳಲು ನಿರಾಕರಿಸಿದ ಪೊಲೀಸರು, ಟ್ವಿಟರ್ ಮೂಲಕ ದೂರು ನೀಡುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಉದಾಹರಣೆಗಳಿವೆ. \

ನಗರದಲ್ಲಿ ನಡೆಯುತ್ತಿರುವ ಸಮಾಜ ವಿರೋಧಿ ಅಕ್ರಮ ಚಟುವಟಿಕೆಗಳ ಬಗ್ಗೆಯೂ ಸಾರ್ವಜನಿಕರು ನೀಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಬೆಂಗಳೂರು ಪೊಲೀಸರು ಟ್ವಿಟರ್ ಅಕೌಂಟ್‍ನ್ನು ಪರಿಣಾಮಕಾಗಿ ಸಂವಹನ ಸಾಧನವಾಗಿ ಬಳಸಿಕೊಂಡಿರುವುದು ದೇಶಕ್ಕೆ ಮಾದರಿಯಾಗಿದೆ.

ಪ್ರಾರಂಭಿಕವಾಗಿ ಪ್ರಧಾನಿ ಕಚೇರಿ, ವಿದೇಶಾಂಗ ಇಲಾಖೆ, ಭಾರತೀಯ ಸೇನೆ, ಭಾರತೀಯ ರೈಲ್ವೆ, ದೇಶದ 14 ಮುಖ್ಯಮಂತ್ರಿಗಳ ಟ್ವಿಟರ್ ಅಕೌಂಟ್‍ಗಳಿಂದ ಸಂದೇಶ ಪಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

Write A Comment