ರಾಷ್ಟ್ರೀಯ

ನೈತಿಕ ಪೊಲೀಸ್‌ಗಿರಿ : ಯುವ ಜೋಡಿಗೆ ಥಳಿಸಿದ ನಾಲ್ವರ ಬಂಧನ

Pinterest LinkedIn Tumblr

girl-thrashed

ಹಥ್ರಾಸ್ (ಉತ್ತರ ಪ್ರದೇಶ), ಮಾ.18: ಮಾರ್ಕೆಟ್ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಪಿಯು ವಿದ್ಯಾರ್ಥಿನಿ ಹಾಗೂ ಅವಳ ಗೆಳೆಯನನ್ನು ಆರು ಮಂದಿ ಯುವಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇವರಿಬ್ಬರನ್ನೂ ಥಳಿಸುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಅದನ್ನು ವಾಟ್ಸ್‌ಅಪ್‌ನಲ್ಲಿ ಕಳುಹಿಸಿದ ದುಷ್ಕರ್ಮಿಗಳಲ್ಲಿ ಕೆಲವರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ಮಾ.8ರಂದು ನಡೆದಿದ್ದ ಈ ಘಟನೆ ಬಗ್ಗೆ ಬಾಲಕಿಯ ಚಿಕ್ಕಪ್ಪ ನೀಡಿದ ದೂರನ್ನು ಆಧರಿಸಿ ಪೊಲೀಸರು ನಾಲ್ವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

4-arrest-in-UP

ಘಟನೆ ವಿವರ: ವಿದ್ಯಾರ್ಥಿನಿ ಮತ್ತು ಅವಳ ಸ್ನೇಹಿತ ಮಾರ್ಕೆಟ್ ಬಳಿ ಬೈಕ್‌ನಲ್ಲಿ ಬರುತ್ತಿದ್ದರು. ಆಗ ಇತರ ಆರು ಮಂದಿ ಬೈಕ್‌ಗಳಲ್ಲಿ ಬಂದು ಇವರನ್ನು ಸುತ್ತುವರಿದರು. ನಂತರ ನಿರ್ಜನ ಪ್ರದೇಶವೊಂದಕ್ಕೆ ಬರುವಂತೆ ಸೂಚಿಸಿದರು. ಇವರಿಬ್ಬರೂ ಅಲ್ಲಿಗೆ ಹೋದ ನಂತರ ಆರು ಮಂದಿ ಸೇರಿ ಇವರನ್ನು ಸಿಕ್ಕಸಿಕ್ಕಂತೆ ಥಳಿಸಿದರು. ಸುಮಾರು 10 ನಿಮಿಷಕ್ಕೂ ಹೆಚ್ಚು ಹೊತ್ತು ಥಳಿಸಿದ ಆ ದೃಶ್ಯವನ್ನು ಅವರ ಗುಂಪಿನಲ್ಲೊಬ್ಬ ಮೊಬೈಲ್‌ನಲ್ಲಿ ಚಿತ್ರೀಕರಿಸಿದ. ಬಳಿಕ ಅದನ್ನು ವಾಟ್ಸ್‌ಅಪ್‌ನಲ್ಲಿ ಹರಿಯಬಿಟ್ಟಿದ್ದ. ವಿದ್ಯಾರ್ಥಿನಿ ಮನೆಯಲ್ಲಿ ಈ ಬಗ್ಗೆ ತಿಳಿಸಲೇ ಇಲ್ಲ. ಆದರೆ, ವಾಟ್ಸ್‌ಅಪ್‌ನಲ್ಲಿ ದೃಶ್ಯ ಕಂಡ ಅವಳ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ. ಆ ದೃಶ್ಯದಲ್ಲಿ ಬಾಲಕಿ ಮತ್ತು ಗೆಳೆಯನನ್ನು ದುಷ್ಕರ್ಮಿಗಳು ಮರದ ರೆಂಬೆಯಿಂದ ಹೊಡೆಯುತ್ತಿರುವುದು ಚಿತ್ರೀಕರಣವಾಗಿತ್ತು.

Write A Comment