ರಾಷ್ಟ್ರೀಯ

ಇ0ದು ರೈಲ್ವೆ ಬಜೆಟ್‌: ಖಾಸಗಿ ಹೂಡಿಕೆಗೆ ಉತ್ತೇಜನ?

Pinterest LinkedIn Tumblr

railwayweb

ನವದೆಹಲಿ: ಎನ್‌ಡಿಎ ಸರ್ಕಾರದ ಎಂಟು ತಿಂಗಳ ಅವಧಿಯಲ್ಲಿ ಎರಡನೆಯ ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಸುರೇಶ್ ಪ್ರಭಾಕರ್‌ ಪ್ರಭು ಅವರು ನಾಳೆ (ಫೆ.26) ಪ್ರಸಕ್ತ ಸಾಲಿನ ರೈಲ್ವೆ ಬಜೆಟ್ ಮಂಡಿಸಲಿದ್ದಾರೆ.

ರೈಲ್ವೆ ಇಲಾಖೆ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಈ ಬಾರಿ ಬಜೆಟ್‌ನಲ್ಲಿ ಪ್ರಯಾಣ ದರ ಮತ್ತು ಸರಕು ಸಾಗಣೆ ದರ ಏರಿಕೆ ಮಾಡುವರೇ ಅಥವಾ ನಷ್ಟಭರ್ತಿಗಾಗಿ ಇನ್ನಿತರ ಪರ್ಯಾಯ ಕ್ರಮಗಳನ್ನು ಪ್ರಕಟಿಸುವರೇ ಎನ್ನುವುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಡಿಸೇಲ್‌ ದರ ಇಳಿದಿದ್ದರೂ ರೈಲ್ವೆ ಪ್ರಯಾಣ ದರ ತಗ್ಗಿಸುವ ಪ್ರಸ್ತಾವ ಸದ್ಯಕ್ಕಂತೂ ಪರಿಶೀಲನೆಯಲ್ಲಿ ಇಲ್ಲ ಎಂದು ಸುರೇಶ್ ಪ್ರಭು ಅವರೇ ಈಗಾಗಲೇ ಸುಳಿವು ನೀಡಿದ್ದಾರೆ.  ಹಾಗಂತ ಪ್ರಯಾಣ ದರ ಏರಿಸುವ ಯಾವುದೇ  ಪ್ರಸ್ತಾವವೂ  ನಮ್ಮ ಮುಂದಿಲ್ಲ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಕೂಡ ಸ್ಪಷ್ಟಪಡಿಸಿದ್ದಾರೆ.

ಕಳೆದ ಜುಲೈನಲ್ಲಿ ಮಂಡಿಸಿದ ಮೋದಿ ಸರ್ಕಾರದ ಮೊದಲ ರೈಲ್ವೆ ಬಜೆಟ್‌ನಲ್ಲಿ ರೈಲು ಪ್ರಯಾಣ ದರವನ್ನು ಶೇ 14.2ರಷ್ಟು ಮತ್ತು ಸರಕು ಸಾಗಣೆ ದರವನ್ನು ಶೇ 6.5ರಷ್ಟು ಹೆಚ್ಚಿಸಲಾಗಿತ್ತು.
ರೈಲ್ವೆ ಇಲಾಖೆ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಹಿಂದಿನ ಬಜೆಟ್‌ಗಳಿಗೆ ಹೋಲಿಸಿದರೆ ಈ ಬಾರಿ ಹೊಸ ರೈಲುಗಳ ಸಂಖ್ಯೆಯಲ್ಲಿ ಖಂಡಿತ ಇಳಿಕೆ ಆಗಲಿದೆ ಎನ್ನುತ್ತಾರೆ ಬಜೆಟ್‌ ತಜ್ಞರು.

‘ಭಾರತದಲ್ಲೇ ತಯಾರಿಸಿ’ ಯೋಜನೆಯ ಭಾಗವಾಗಿ ರೈಲ್ವೆ ವಲಯದಲ್ಲಿ ಖಾಸಗಿ ಹೂಡಿಕೆ ಉತ್ತೇಜಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ರೈಲು ನಿಲ್ದಾಣ ನಿರ್ವಹಣೆ ಯನ್ನು ಖಾಸಗಿಯವರಿಗೆ ನೀಡುವುದು, ರೈಲುಗಳಲ್ಲಿ ಖಾಸಗಿ ಉತ್ಪನ್ನಗಳ ಜಾಹೀರಾತು ಪ್ರದರ್ಶನಕ್ಕೆ  ಅವಕಾಶ ಕಲ್ಪಿಸುವುದು, ರೈಲುಗಳಿಗೆ ಪ್ರಸಿದ್ಧ ಖಾಸಗಿ ಕಂಪೆನಿಗಳ ಬ್ರ್ಯಾಂಡ್‌ ಹೆಸರು ಇಡುವ ಆಲೋಚನೆ ಸೇರಿದಂತೆ ಸರ್ಕಾರಿ–ಖಾಸಗಿ ಸಹಭಾಗಿತ್ವದ ಹಲವು ಪ್ರಸ್ತಾವಗಳು ಸುರೇಶ್‌ ಪ್ರಭು ಅವರ ಪರಿಶೀಲನೆಯಲ್ಲಿವೆ.

Write A Comment