ಮುಂಬೈ

ತೀಯಾ ಸಮಾಜ ದ ಮಹಿಳಾ ವಿಭಾದದಿಂದ ಹಳದಿ ಕುಂಕುಮ

Pinterest LinkedIn Tumblr

Thiya Mumbai_Feb 23_2015-015

ಮುಂಬಯಿ : ತೀಯಾ ಸಮಾಜ, ಮುಂಬಯಿ ಇದರ ಪಶ್ಚಿಮ ವಲಯ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವು ಫೆ. 22 ರಂದು, ಅಪರಾಹ್ನ ಜೋಗೇಶ್ವರಿ ಪೂರ್ವ ಸಾಯಿ ಗಣೇಶ ಮಂದಿರ, ಬಾಂದ್ರೇಕರ್ವಾಡಿ ಇಲ್ಲಿ ಜರಗಿತು.

ಸಮಾಜದ ಪಶ್ಚಿಮ ವಲಯ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಗಂಗಾಧರ ಕಲ್ಲಾಡಿಯವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿತು. ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಆರ್. ಬೆಳ್ಚಡ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದಿವ್ಯಾ ಆರ್. ಕೋಟ್ಯಾನ್, ಕಾರ್ಯದರ್ಶಿ ಚಂದ್ರ ಸುವರ್ಣ, ಪೂರ್ವ ವಲಯದ ಕಾರ್ಯಾಧ್ಯಕ್ಷ ಬಾಬು ಬೆಳ್ಚಡ ಹಾಗೂ ಸಮಾಜದ ಇತರ ಸದಸ್ಯರ ಮತ್ತು ಮಹಿಳಾ ವಿಭಾಗದ ಇತರ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸುದರೊಂದಿಗೆ ಹಳದಿ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Thiya Mumbai_Feb 23_2015-001

Thiya Mumbai_Feb 23_2015-002

Thiya Mumbai_Feb 23_2015-003

Thiya Mumbai_Feb 23_2015-004

Thiya Mumbai_Feb 23_2015-005

Thiya Mumbai_Feb 23_2015-006

Thiya Mumbai_Feb 23_2015-007

Thiya Mumbai_Feb 23_2015-008

Thiya Mumbai_Feb 23_2015-009

Thiya Mumbai_Feb 23_2015-010

Thiya Mumbai_Feb 23_2015-011

Thiya Mumbai_Feb 23_2015-012

Thiya Mumbai_Feb 23_2015-013

Thiya Mumbai_Feb 23_2015-014

ಸ್ಥಳೀಯ ಸದಸ್ಯರಿಂದ ಭಜನೆ, ವಿವಿಧ ಒಳಾಂಗಣ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ನಂತರ ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮವು ನೆರವೇರಿತು.

ಸಮಾಜದ ಬೋರ್ಡ್ ಆಫ್ ಟ್ರಸ್ಟಿನ ಕಾರ್ಯಾಧ್ಯಕ್ಷ, ತೀಯಾ ಕುಲ ರತ್ನ ರೋಹಿದಾಸ ಬಂಗೇರ, ಮಾಜಿ ಅಧ್ಯಕ್ಷ ಕೆ. ಪಿ. ಅರವಿಂದ, ಉಪಾಧ್ಯಕ್ಷ ಟಿ. ಬಾಬು ಬಂಗೇರ, ಪೂರ್ವ ವಲಯದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಜ್ವಲಾ ಚಂದ್ರಶೇಖರ್, ತೀಯಾ ಬೆಳಕು ಸಂಪಾದಾಕ ಶ್ರೀಧರ ಸುವರ್ಣ ಹಾಗೂ ಕಾರ್ಯನಿರ್ವಾಹಕ ಸಮಿತಿಯ, ಸ್ಥಳೀಯ ಸಮಿತಿಯ ಮತ್ತು ಮಹಿಳಾ ವಿಭಾಗಗಳ ಇತರ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಯಿತು.

ವರದಿ : ಈಶ್ವರ ಎಂ. ಐಲ್

ಚಿತ್ರ : ದಯಾನಂದ ಸಾಲ್ಯಾನ್

Write A Comment