ಬಾಗಲಕೋಟೆ: ಕೂಡಲಸಂಗಮ ದಲ್ಲಿರುವ ‘ವಿಶ್ವಗುರು’ ಬಸವಣ್ಣನ ಐಕ್ಯ ಮಂಟಪದಲ್ಲಿ ಪೂಜೆ, ಪುನಸ್ಕಾರಕ್ಕೆ ಅವಕಾಶ ಗಿಟ್ಟಿಸಿಕೊಳ್ಳಲು ಕೆಲವರು ಪ್ರಯತ್ನ ನಡೆಸುತ್ತಿರುವುದು ಶಂಕೆಗೆ ಎಡೆ ಮಾಡಿದೆ.
ಪೂಜೆ, ಪುನಸ್ಕಾರವು ಬಸವತತ್ವಕ್ಕೆ ವಿರುದ್ಧವಾಗಿರುವುದರಿಂದ ಈ ಮೊದಲಿನಿಂದಲೂ ಐಕ್ಯಮಂಟಪದಲ್ಲಿ ಯಾವುದೇ ತರಹದ ಪೂಜೆಗೂ ಅವಕಾಶ ನೀಡಿಲ್ಲ.
ಅಲ್ಲಿಗೆ ಭೇಟಿ ನೀಡುವ ಶರಣರು ಹುಂಡಿಗೆ ಹಾಕುವ ಹಣದ ಮೇಲೆ ಇದೀಗ ಕೆಲವರ ಕಾಕದೃಷ್ಟಿ ಬಿದ್ದಿದ್ದು, ಪೂಜೆಗೆ ಅವಕಾಶ ಗಿಟ್ಟಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಭಾರಿ ಲಾಭಿ ನಡೆಸುತ್ತಿದ್ದಾರೆ.
ಪೂಜಾರಿಗಳ ಪರವಾಗಿ ಶಾಸಕ ರೊಬ್ಬರು ಮತ್ತು ಕೂಡಲಸಂಗಮದ ಪ್ರಭಾವಿ ಸ್ವಾಮೀಜಿಯೊಬ್ಬರು ಮುಖ್ಯ ಮಂತ್ರಿಗಳನ್ನು ಫೆಬ್ರುವರಿ 6ರಂದು ಭೇಟಿ ಮಾಡಿ ಐಕ್ಯಮಂಟಪದಲ್ಲಿ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಬೇಡಿಕೆಗೆ ಆರಂಭದಲ್ಲಿ ವಿರೋಧಿಸಿದ್ದ ಮುಖ್ಯಮಂತ್ರಿ ಸಿದ್ದ ರಾಮಯ್ಯ ಬಳಿಕ ಶಾಸಕ ಮತ್ತು ಸ್ವಾಮೀಜಿ ಯವರ ಒತ್ತಡಕ್ಕೆ ಮಣಿದು, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತರಿಗೆ ಪರಿಶೀಲಿಸು ವಂತೆ ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಪೂಜೆಗೆ ಅವಕಾಶವಿಲ್ಲ: ಪ್ರಸ್ತುತ ಕೂಡಲಸಂಗಮದ ಸಂಗಮನಾಥನ ದೇವಾಲಯದಲ್ಲಿ ಸರದಿಯಾಗಿ ಪೂಜೆ ಮಾಡುತ್ತಿರುವ 72 ಕುಟುಂಬದವರು ಇದೀಗ ಐಕ್ಯಮಂಟಪದಲ್ಲೂ ತಮಗೆ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಯ ಪ್ರಭಾರ ಆಯುಕ್ತ ಮಹಾದೇವ ಮುರಗಿ ಸೋಮವಾರ ತಿಳಿಸಿದರು.
ಐಕ್ಯಮಂಟಪದ ಸ್ವಚ್ಛತೆ, ನಿರ್ವಹಣೆ ಮತ್ತು ಪೂಜೆಗಾಗಿ ಮಂಡಳಿಯಿಂದಲೇ ಒಬ್ಬ ಅರ್ಚಕರನ್ನು ನಿಯೋಜಿಸ ಲಾಗಿದೆ. ಅವರು ಬೆಳಿಗ್ಗೆ ಸ್ವಚ್ಛ ಗೊಳಿಸಿದ ನಂತರ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗಾಗಿ ಖಾಸಗಿಯರಿಗೆ ಪೂಜೆ ಮಾಡಲು ಅವಕಾಶ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ತೀವ್ರ ವಿರೋಧ: ಐಕ್ಯಮಂಟಪದಲ್ಲಿ ಪೂಜೆಗೆ ಅವಕಾಶ ನೀಡಲು ಪ್ರಯತ್ನ ನಡೆಯುತ್ತಿರುವ ವಿಷಯ ಬಹಿರಂಗ ವಾಗುತ್ತಿರುವಂತೆ ಬಸವ ತತ್ವ ಅನುಯಾಯಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪೂಜೆಗೆ ಕೋರ್ಟ್ ನಿರ್ಬಂಧ: ಐಕ್ಯಮಂಟಪ ವೀಕ್ಷಣೆಗೆ 2006ರಲ್ಲಿ ಬಂದಿದ್ದ ಕೆಲ ಯಾತ್ರಾರ್ಥಿಗಳಿಗೆ ಪೂಜಾರಿಗಳು ಒತ್ತಾಯ ಪೂರ್ವಕ ವಾಗಿ ಕುಂಕುಮ, ವಿಭೂತಿ ಮತ್ತು ರುದ್ರಾಕ್ಷಿ ನೀಡಿ, ಹಣ ವಸೂಲಿ ಮಾಡಿದ ಸಂಬಂಧ ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ದೂರು ಬಂದ ಕಾರಣ, ಮಂಡಳಿಯು ಹುನಗುಂದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹುನಗುಂದ ಜೆಎಂಎಫ್‌ಸಿ ನ್ಯಾಯಾಲ ಯವು 2012ರಲ್ಲಿ ತೀರ್ಪು ನೀಡಿ, ಮಂಡಳಿ ಹೊರತುಪಡಿಸಿ ಐಕ್ಯ ಮಂಟಪದಲ್ಲಿ ಖಾಸಗಿಯವರಿಗೆ ಪೂಜೆ, ಪುನಸ್ಕಾರ ನಡೆಸದಂತೆ ಸಂಪೂರ್ಣ ನಿರ್ಬಂಧ ವಿಧಿಸಿತ್ತು. ಯಾತ್ರಾರ್ಥಿಗಳಿಂದ ಪೂಜೆಯ ನೆಪದಲ್ಲಿ ಹಣ ವಸೂಲಿ ಮಾಡಿದ್ದ ಪೂಜಾರಿಗಳಿಗೆ ದಂಡ ಮತ್ತು ಶಿಕ್ಷೆ ವಿಧಿಸಿತ್ತು.
