ಕನ್ನಡ ವಾರ್ತೆಗಳು

ಶಿರೂರು ರತ್ನಾ ಕೊಠಾರಿ ಸಾವು ಪ್ರಕರಣ ರತ್ನಾ ಕುಟುಂಬಕ್ಕೆ ನ್ಯಾಯ ಒದಗಿಸದಿದ್ದಲ್ಲಿ ಎಸ್‌ಎಫ್‌ಐ ಹಾಗೂ ಡಿವೈ‌ಎಫ್‌ಐ ಸಂಘಟನೆಗಳಿಂದ ಉಘ್ರ ಹೋರಾಟದ ಎಚ್ಚರಿಕೆ

Pinterest LinkedIn Tumblr

Kundapura_SFI_Protest. (1)

ಕುಂದಾಪುರ: ಕಳೆದ 7 ತಿಂಗಳುಗಳ ಹಿಂದೆ ಕಾಲೇಜಿನಿಂದ ಮನೆಗೆ ಮರಳುತ್ತಿರುವಾಗ ನಿಗೂಢವಾಗಿ ಕಾಡಿನಲ್ಲಿ ಮ್ರತಪಟ್ಟ ವಿದ್ಯಾರ್ಥಿನಿ ಶಿರೂರು ಆಲಂದೂರಿನ ಕೋಣನಮಕ್ಕಿ ನಿವಾಸಿ ರತ್ನಾ ಕೊಠಾರಿ ಸಾವಿನ ಕುರಿತು ಈವರೆಗೂ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಹಾಗೂ ಆಕೆಯ ಮನೆಗೂ ಸರಕಾರ ಘೋಷಿಸಿದ ಪರಿಹಾರ ಲಭಿಸಿಲ್ಲ, ಆಕೆಗೆ ನ್ಯಾಯ ಸಿಗದಿದ್ದರೇ ಉಘ್ರ ಹೋರಾಟ ನಡೆಸಲಾಗುತ್ತದೆ ಎಂದು ಎಸ್.ಎಫ್.ಐ. ತಾಲೂಕು ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ ಹೇಳಿದರು.

Kundapura_SFI_Protest. Kundapura_SFI_Protest. (12) Kundapura_SFI_Protest. (8) Kundapura_SFI_Protest. (9) Kundapura_SFI_Protest. (10) Kundapura_SFI_Protest. (7) Kundapura_SFI_Protest. (6) Kundapura_SFI_Protest. (5) Kundapura_SFI_Protest. (4)

ಶಿರೂರಿನ ರತ್ನಾ ಕೊಠಾರಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಎಸ್.ಎಫ್.ಐ. ಮತ್ತು ಡಿ.ವೈ.ಎಫ್.ಐ. ಸಂಘಟನೆಗಳ ನೇತ್ರತ್ವದಲ್ಲಿ ಕುಂದಾಪುರ ಶಾಸ್ತ್ರೀ ವ್ರತ್ತದಲ್ಲಿ ಹಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸ್ಥಳಿಯ ಶಾಸಕರು ಜುಲೈ.9 ತಾರಿಖಿನೊಳಗಾಗಿ ರತ್ನಾ ಕೊಠಾರಿ ಕುಟುಂಬಿಕರಿಗೆ ಪರಿಹಾರ ನೀಡದಿದ್ದಲ್ಲಿ ಶಾಸಕರ ಮನೆ ಮುತ್ತಿಗೆ ಹಾಕುವುದಾಗಿಯೂ ಈ ಸಂದರ್ಭ ಪ್ರತಿಭಟನಾಕಾರರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಡಿವೈ‌ಎಫ‌ಐ ತಾಕೂ ಕಾರ್ಯದರ್ಶಿ ರಾಜೇಶ ವಡೇರಹೋಬಳಿ, ಸಂತೋಷ, ರವಿ, ರಾಜಾ ಬಿ.ಟಿ.ಆರ್., ಮಂಜುನಾಥ, ಆಶೋಕ್ ಹಟ್ಟಿಯಂಗಡಿ, ಎಸ್.ಎಫ್.ಐ. ಸಂಘಟನೆಯ ಅಕ್ಷಯ ವಡೇರಹೋಬಳಿ, ಆಫ್ರೀನ್, ಕರ್ನಾಟಕ ಜನಶಕ್ತಿ ಬೆಂಗಳೂರು ಮಹಿಳಾ ಮುನ್ನಡೆ ಇದರ ಶೀಲಾ ರಾಮನಾಥನ್, ಪ್ರಾಧ್ಯಾಪಕರಾದ ಹಯವದನ ಮೂಡುಸಗ್ರಿ ಉಪಸ್ಥಿತರಿದ್ದರು.

ರಾಜ್ಯ ಸರಕಾರದ ಪ್ರತಕೃತಿಯನ್ನು ಪ್ರತಿಭಟನಾಕಾರರು ದಹಿಸುವ ಮೂಲಕ ರತ್ನಾ ಸಾವಿಗೆ ನ್ಯಾಯ ಒದಗಿಸುವಂತೆ ಸರಕಾರವನ್ನು ಆಗ್ರಹಿಸಿದರು.

Write A Comment