ಮಂಗಳೂರು :ದ.ಕ. ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಇಂಡಿಯಾನ ಹಾಸ್ಪಿಟಲ್ ಅಂಡ್ ಹಾರ್ಟ್ ಇನ್ಸಿಟಿಟ್ಯೂಟ್ ಜಿಲ್ಲೆಯ ಕಾರ್ಯನಿರತ ಪತ್ರಕರ್ತರು ಮತ್ತು ಅವರ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಆಯೋಜಿಸಿದೆ.
ಕಾರ್ಯನಿರತ ಪತ್ರಕರ್ತರು, ಪತಿ ಅಥವಾ ಪತ್ನಿ, ಹೆತ್ತವರಿಗೆ ಅಂದಾಜು (ಪುರುಷರಿಗೆ 4985ರೂ.) ಹಾಗೂ ಮಹಿಳೆಯರಿಗೆ (4705 ರೂ.), ಫಾರ್ಮೆಸಿ, ಅಂಗಾಂಗ ಕಸಿ ಮತ್ತು ವೈದ್ಯ ಶುಲ್ಕ ಹೊರತುಪಡಿಸಿ ಒಟ್ಟು ಬಿಲ್‌ಮೊತ್ತದಲ್ಲಿ ಶೇ.20 ರಷ್ಟು ಹಾಗೂ ಪತ್ರಕರ್ತರು ಶಿಫಾರಸ್ಸು ಮಾಡುವ ಸಾರ್ವಜನಿಕರಿಗೆ ಯಾವುದೇ ಆರೋಗ್ಯ ತಪಾಸಣೆ ಪ್ಯಾಕೇಜ್‌ನಲ್ಲಿ ಶೇ. 20 ರಿಯಾಯಿತಿ ಘೋಷಿಸಿದೆ.
ಉದ್ಘಾಟನೆ :
ಮಂಗಳೂರಿನ ಪತ್ರಿಕಾಭವನದಲ್ಲಿ ಬುಧವಾರ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಯರ್ ಮಹಾಬಲ ಮಾರ್ಲ, ಆರೋಗ್ಯವಂತ ಸಮಾಜದಿಂದ ದೇಶ, ವಿಶ್ವದ ಪ್ರಗತಿಯಾಗುತ್ತದೆ. ಪ್ರತಿಫಲಾಪೇಕ್ಷೆಯಿಡುವ ಸೇವೆಯಿಂದಾಗಿ ಸಮಾಜ ಹಾಳಾಗುತ್ತದೆ.
ಆದರೆ ದ.ಕ.ಜಿಲ್ಲಾ ಪತ್ರಕರ್ತರು ಯಾವುದೇ ನಿರೀಕ್ಷೆಯನ್ನಿಡದೇ ಕಾರ್ಯನಿರ್ವಹಿಸುವವರು.ವೈಯುಕ್ತಿಕವಾಗಿ, ಕೌಟುಂಬಿಕವಾಗಿ ಸಂಕಷ್ಟದಲ್ಲಿರುವವರು. ಈ ಹಿನ್ನೆಲೆಯಲ್ಲಿ ಪತ್ರಕರ್ತರ ಮತ್ತು ಕುಟುಂಬವರ್ಗದವರ ಆರೋಗ್ಯ ಕಾಪಾಡುವ ಮೂಲಕ ಪತ್ರಕರ್ತರು ಸಮಾಜದಲ್ಲಿ ಇನ್ನಷ್ಟು ಪರಿಪೂರ್ಣವಾಗಿ ತೊಡಗಿಸಿಕೊಳ್ಳುವಂತಾಗಲು ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಹಾಗೂ ಮಾದರಿಯಾದುದು ಎಂದರು.
ಆಸ್ಪತ್ರೆಯ ಆಡಳಿತ ನಿರ್ದೇಶಕಡಾ.ಯೂಸುಫ್‌ಕುಂಬ್ಳೆ ಮಾತನಾಡಿ,ಸದಾ ಒತ್ತಡದ ನಡುವೆ ಕಾರ್ಯನಿರ್ವಹಿಸುವುದರಿಂದ ಅತೀ ಕಡಿಮೆ ವಯಸ್ಸಿನಲ್ಲಿ ಅನಾರೋಗ್ಯಕ್ಕೊಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಗುರುತಿಸಿಕೊಂಡಿರುವ ಮಾಧ್ಯಮ ಮಂದಿಯಲ್ಲಿ ಜಾಗೃತಿ ಮೂಡಿಸಿ ಆರೋಗ್ಯವಂತರನ್ನಾಗಿಸಲು ಸಂಸ್ಥೆ ತಪಾಸಣೆಯ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷಜಗನ್ನಾಥ ಶೆಟ್ಟಿ ಬಾಳಾ, ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ,ಇಂಡಿಯಾನ ಸಂಸ್ಥೆಯ ಮಾಧ್ಯಮ ಸಂಯೋಜಕ ಭಾಸ್ಕರ್‌ಅರಸ್ ಉಪಸ್ಥಿತರಿದ್ದರು. ರೆಹಾನ ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್ ವಂದಿಸಿದರು.
