ಕನ್ನಡ ವಾರ್ತೆಗಳು

ಭಾರತೀಯ ಬೈಕ್ ಸಪ್ತಾಹ : ಯೂರೋಪ್‌ನ ಬೈಕ್ ಸ್ಟಂಟ್ ಚಾಂಪಿಯನ್ ಅರಸ್ ಗಿಬಿಝಾ

Pinterest LinkedIn Tumblr

European_Stun_Champion

ಮಂಗಳೂರು,ಜ.28 : ಬೈಕ್ ಪ್ರಿಯರು ಸದಾ ಎದುರು ನೋಡುವ ಮೋಟರ್‌ಬೈಕ್ ಉತ್ಸವವಾಗಿರುವ ಭಾರತೀಯ ಬೈಕ್ ಸಪ್ತಾಹ ಇದರ ಭಾಗವಾಗಿ ಮಂಗಳೂರಿನಲ್ಲಿ ಮಂಗಳವಾರದಂದು ಮೈನವಿರೇಳಿಸುವ ಕಾರ್ಯಕ್ರಮ ನಡೆಯಿತು. ಯೂರೋಪ್‌ನ ಬೈಕ್ ಸ್ಟಂಟ್ ಚಾಂಪಿಯನ್ ಹಾಗೂ ರೆಡ್ ಬುಲ್ ಅಥ್ಲೀಟ್ ಅರಸ್ ಗಿಬಿಝಾ ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದರು.

ಇಂಡಿಯಾ ಬೈಕ್ ವೀಕ್ ಆನ್ ಟೂರ್ ಹೆಸರಿನ ಈ ಕಾರ್ಯಕ್ರಮ ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ಸಂಜೆ  ನಡೆಯಿತು. ಗಿಜಿಝಾ ಅವರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಕರಾವಳಿ ಭಾಗದ ಸಾವಿರಾರು ಬೈಕ್ ಪ್ರಿಯರ ಕುತೂಹಲ ತಣಿಸಿದರು.

ಟೂರ್‌ನ ಮೊದಲ ಹಂತವಾಗಿ ಚಂಡೀಗಡದಲ್ಲಿ ಆರಂಭಗೊಂಡ ಈ ಪ್ರದರ್ಶನವು ತದನಂತರದಲ್ಲಿ ಜೈಪುರ, ಅಹ್ಮದಾಬಾದ್, ಸೂರತ್‌ನಲ್ಲಿ ಈ ಬೈಕ್ ಸ್ಟಂಟ್ ಪ್ರದರ್ಶನ ನಡೆಸಲಿವೆ. ಈಗ ಇದರ ಎರಡನೇ ಹಂತವಾಗಿ ಪುಣೆಯಲ್ಲಿ ಪ್ರದರ್ಶನ ನೀಡಿ ಮತ್ತೆ ಮಂಗಳೂರು ನಗರಕ್ಕೆ ಕಾಲಿಟ್ಟಿದ್ದಾರೆ.. ಬೈಕ್ ಪ್ರಿಯರಿಗೆ ಹೊಸ ಹುರುಪು, ರೋಮಾಂಚನ ಉಂಟುಮಾಡಿ ಬೈಕ್ ಮೇಲಿನ ಮೋಹವನ್ನು ಇನ್ನಷ್ಟು ಹೆಚ್ಚಿಸುವುದೇ ಐಬಿಡಬ್ಲ್ಯು ಆರ್ ಟೂರ್‌ನ ಮುಖ್ಯ ಉದ್ದೇಶ. ಎಂಟು ನಗರಗಳಲ್ಲಿ 40 ಸಾವಿರಕ್ಕೂ ಅಧಿಕ ಬೈಕ್ ಪ್ರಿಯರನ್ನು ತಲುಪುವ ಗುರಿ ಸಂಘಟಕರದ್ದು. ಬೈಕ್ ಪ್ರಿಯರನ್ನು ಇನ್ನಷ್ಟು ಸೆಳೆಯುವುದಕ್ಕಾಗಿಯೇ ಬಂದ ಈ ಯೂರೋಪ್‌ನ ಬೈಕ್ ಸ್ಟಂಟ್ ಚಾಂಪಿಯನ್ ಗಿಬಿಝಾ ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಯಾರೀ ಗಿಬಿಝಾ:
ಲಿಥುವಾನಿಯಾದ 25 ರ ಹರೆಯದ ಗಿಬಿಝಾ ಅವರು ಇತ್ತೀಚಿನ ಯೂರೋ ಕಪ್ ಸ್ಟಂಟ್ ರೈಡಿಂಗ್‌ನ ಚಾಂಪಿಯನ್. ಚಿಕ್ಕ ವಯಸ್ಸಿನಿಂದಲೇ ಬೈಕ್ ಬಗ್ಗೆ ಮೋಹ ಬೆಳೆಸಿಕೊಂಡ ಗಿಜಿಝಾ ಅವರು ತಮ್ಮ 10ನೇ ವಯಸ್ಸಿಗೇ ವೀಲಿಂಗ್ ನಡೆಸಲು ಆರಂಭಿಸಿದ್ದರು. ಅಂದೇ ತಾವೊಬ್ಬ ಜಗತ್ತಿನ ಅತ್ಯುತ್ತಮ ಬೈಕ್ ಸ್ಟಂಟ್‌ಮ್ಯಾನ್ ಆಗಬೇಕೆಂಬ ಛಲ ತೊಟ್ಟು, ಅದನ್ನು ಸಾಧಿಸಲು ಕಠಿಣ ಅಭ್ಯಾಸ ನಡೆಸಿದರು. ಫಲವಾಗಿ ಅವರು ಇಂದು ಜಗತ್ತಿನ ಒಬ್ಬ ಶ್ರೇಷ್ಠ ಬೈಕ್ ಸ್ಟಂಟ್‌ಮ್ಯಾನ್ ಆಗಿ ಗಮನ ಸೆಳೆದಿದ್ದಾರೆ.

ಇಂಡಿಯಾ ಬೈಕ್ ವೀಕ್ 2015 ರ ಭಾಗವಾಗಿ ಐಬಿಡಬ್ಲ್ಯು ಆನ್ ಟೂರ್ ನಡೆಯುತ್ತಿದ್ದು, ಫೆಬ್ರುವರಿ 1 ರಂದು ಕೊಯಮತ್ತೂರು ಹಾಗೂ ಫೆಬ್ರುವರಿ 4 ರಂದು ಕೊಚ್ಚಿಯಲ್ಲಿ ಈ ರೋಮಾಂಚಕ ಬೈಕ್ ಸ್ಟಂಟ್ ಪ್ರದರ್ಶನ ನಡೆಯಲಿದೆ. ಕೊಚ್ಚಿಯಲ್ಲಿ ನಡೆಯುವ ಕಾರ್ಯಕ್ರಮದ ಮೂಲಕ 2 ನೇ ಹಂತದ ಕಾರ್ಯಕ್ರಮ ಕೊನೆಗೊಳ್ಳಲಿದೆ. ಗೋವಾದ ವೆಗಟೋರ್‌ನಲ್ಲಿ ಫೆಬ್ರುವರಿ 20-21 ರಂದು ಭವ್ಯ ಸಮಾರೋಪ ಸಮಾರಂಭ ನಡೆಯಲಿದೆ.

Write A Comment