ಕನ್ನಡ ವಾರ್ತೆಗಳು

ಎಂಬಿಬಿಎಸ್ ವೈದ್ಯರಿಗೆ 2 ವರ್ಷದ ಫೆಲೋಶಿಪ್ ತರಬೇತಿ : ಸಚಿವ ಯು.ಟಿ. ಖಾದರ್

Pinterest LinkedIn Tumblr

UT_Kadar_Pic

ದಾವಣಗೆರೆ,ಜ.28: ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಸ್ಕೂಲ್ ಆಫ್ ಸರ್ಜನ್ ಸ್ಥಾಪಿಸಿ, ಎಂಬಿಬಿಎಸ್ ವೈದ್ಯರಿಗೆ 2 ವರ್ಷದ ಫೆಲೋಶಿಪ್ ತರಬೇತಿ ನೀಡುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಹೆರಿಗೆ, ಸ್ತ್ರೀರೋಗ, ಅರಿವಳಿಕೆ, ರೇಡಿಯಾಲಜಿ ಹೀಗೆ ವಿವಿಧ ವಿಭಾಗಗಳಿಂದ ಎಂಬಿಬಿಎಸ್ ವೈದ್ಯರಿಗೆ ತರಬೇತಿ  ನೀಡುವ ಮೂಲಕ  ಸ್ನಾತಕೋತ್ತರ  ವೈದ್ಯರ ಕೊರತೆ ನೀಗಿಸಲಾಗುವುದು ಎಂದರು.ಎರಡು ವರ್ಷದ ಫೆಲೋಶಿಪ್ ತರಬೇತಿ ಪಡೆದ ವೈದ್ಯರಿಗೆ ಇಲಾಖೆ ಪ್ರಮಾಣಪತ್ರ ನೀಡಿ, ಅಂತಹವರ ಸೇವೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸಿಕೊಳ್ಳಲಾಗುವುದು.ಆದರೆ, ಪ್ರಮಾಣಪತ್ರ ಪಡೆದ ನಂತರಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಈ  ಪ್ರಮಾಣಪತ್ರವು ಮಾನದಂಡವಾಗದು ಎಂದು ಸ್ಪಷ್ಟಪಡಿಸಿದರು.ರಾಜ್ಯದಲ್ಲಿ ಸುಮಾರು 300 ಎಂಬಿಬಿ ಎಸ್ ವೈದ್ಯರಿಗೆ ಫೆಲೋಶಿಪ್ ಕೋರ್ಸ್ ತರಬೇತಿ ನೀಡಿ, ಅಂತಹವರ ಸೇವೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸಿಕೊಳ್ಳಲಾಗುವುದು.

ಸರ್ಕಾರಿ ವೈದ್ಯರ ವೇತನ ಹೆಚ್ಚಳಕ್ಕೆ 2 -3 ಸಲ ಪ್ರಸ್ತಾವ ಸಲ್ಲಿಸಿದ್ದೇವೆ. ಎಂಬಿಬಿ ಎಸ್ ಮತ್ತು ಸ್ನಾತಕೋತ್ತರ ವೈದ್ಯರ ಮಧ್ಯೆ ಆರೆಂಟು ಸಾವಿರ ರು.ಗಳ ವೇತನ ವ್ಯತ್ಯಾಸವಿದೆ. ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವುದು ಸರ್ಕಾರದ ಉದ್ದೇಶ. ಅದಕ್ಕೆ ಎಂಸಿಐ ಸ್ಪಂದಿಸುತ್ತಿಲ್ಲಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಖಾಲಿ ಹುದ್ದೆ ಭರ್ತಿ: ಆರೋಗ್ಯ ಇಲಾಖೆ ಯಲ್ಲಿ ವೈದ್ಯರೂ ಸೇರಿ ಸಾವಿರಾರು ಹುದ್ದೆ ಖಾಲಿ ಇದ್ದು, ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ತಿಳಿಸಿದರು.

ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದ ಹಿನ್ನೆಲೆ ಯಲ್ಲಿ ವೈದ್ಯರ ನೇಮಕ ಪ್ರಕ್ರಿಯೆ  ತಡವಾಯಿತು. ಈಗ 961 ಸ್ನಾತಕೋತ್ತರ ವೈದ್ಯರ ಹುದ್ದೆ, 331 ಎಂಬಿಬಿಎಸ್ ವೈದ್ಯರು, 87ದಂತ ತಜ್ಞರು, 3 ಸಾವಿರ ಶುಶ್ರೂಷಕರು, ಲ್ಯಾಬ್ ಟೆಕ್ನಿಷಿಯನ್, ಪ್ಯಾರಾ ಮೆಡಿಕಲ್ ಸಿಬ್ಬಂದಿ ಶೀಘ್ರ ನೇಮಕಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜೀವನಾವಶ್ಯಕ ಔಷಧಿ  ಹಾಗೂ ಇತರೆ ಔಷ„ಗಳನ್ನು ವರ್ಷವಿಡೀ ದಿನದ 24ಗಂಟೆಯೂ ಸಿಗುವಂತೆ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಔಷಧಿ  ಕೇಂದ್ರ ಸ್ಥಾಪಿಸಲು ಎಚ್ಎಲ್ಎಲ್ (ಹಿಂದುಸ್ಥಾನ ಲಾಜಿಸ್ಟಿಕಲ್ ಲ್ಯಾಬ್) ಜತೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

ಪ್ರಾಯೋಗಿಕವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಇಂತಹ ಕೇಂದ್ರ ತೆರೆ ಯಲಾಗುವುದು ಎಂದರು.ರಾಜ್ಯದ 4 ಕಡೆ ಎನ್ಸಿಡಿಆರೋಗ್ಯವಂತ ಸಮಾಜ, ಆರೋಗ್ಯವಂತ ಕರ್ನಾಟಕ ನಿರ್ಮಾಣ ನಮ್ಮ ಸರ್ಕಾರದ ಕನಸಾಗಿದ್ದು, ಈ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಲು ದಾವಣಗೆರೆ, ಮಂಗಳೂರು ಸೇರಿದಂತೆ ರಾಜ್ಯದ 4 ಕಡೆ ಎನ್ ಸಿಡಿ(ನಾನ್ ಕಮ್ಯುನಿಕಬಲ್ ಡಿಸೀಸ್) ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಖಾದರ್ ತಿಳಿಸಿದರು. ಮೊದಲ ಹಂತದಲ್ಲಿಪ್ರಾಯೋಗಿಕವಾಗಿ ದಾವಣಗೆರೆ, ಮಂಗಳೂರಿನಲ್ಲಿ ಇದು ಜಾರಿಯಾಗಲಿದೆ ಎಂದು ಅವರು ಹೇಳಿದರು

Write A Comment