ಕನ್ನಡ ವಾರ್ತೆಗಳು

ಬಸ್ ನಡಿಗೆ ಬಿದ್ದ ಬಾಲಕ ಸ್ಥಳದಲ್ಲೇ ಸಾವು.

Pinterest LinkedIn Tumblr

school_boy_death_1

ಮಂಗಳೂರು,ಜ.28  : ಕೆ.ಎಸ್ ರಾವ್ ರೋಡಿನಲ್ಲಿ ಶಾಲಾ ಬಾಲಕನೊಬ್ಬ ರಸ್ತೆ ದಾಟುತ್ತಿದ್ದ ವೇಳೆ ಬಸ್ಸಿನಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದ್ದು, ಚಾಲಕ ಅಪಘಾತ ನಡೆಸಿ ಪರಾರಿಯಾಗಿದ್ದಾನೆ.

school_boy_death_2 school_boy_death_3 school_boy_death_4

ಬಾಲಕ ಕೆ.ಎಸ್.ರಾವ್ ಬಳಿ ಇರುವ ಜನತಾ ಬಜಾರ್ ನ ಗಣಪತಿ ಶಾಲೆಯಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿರುತ್ತಾನೆ. ಎಂದಿನಂತೆ ತನ್ನ ಸಹೋದರ ಹಾಗೂ ಸಹೋದರಿ ಜೊತೆ ಶಾಲೆಗೆ ತೆರಳುತ್ತಿದ್ದ ವೇಳೆಯಲ್ಲಿ ಸಹೋದರ ರಾಜ್ ಕುಮಾರ್ ಕೈ ಹಿಡಿದು ರಸ್ತೆ ದಾಟುತ್ತಿದ್ದಾಗ ಎದುರುಗಡೆಯಿಂದ ಸ್ಟೇಟ್ ಬ್ಯಾಂಕ್ ನಿಂದ ಕುತ್ತಾಲಬೈಲ್ ಕಡೆ ಹೋಗುತ್ತಿದ್ದ ‘ಗೋಲ್ಡನ್’ ’13 B’ ಎಂಬ ಬಸ್ ಬಾಲಕನ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದಾನೆ .

school_boy_death_6 school_boy_death_7a school_boy_death_5

ಮೃತ ಪಟ್ಟ ಬಾಲಕ ಕಟೀಲ್ ನಿವಾಸಿಗಳಾದ ರಾಜಮನಿ ಮತ್ತು ಸುಮಿತ್ರಾ ದಂಪತಿಗಳ ಪುತ್ರ ಆನಂದ್ ರಾಜ್ ಎನ್ನಲಾಗಿದ್ದು,

ಘಟನಾ ಸ್ಥಳಕ್ಕೆ ಸಂಚಾರ ಠಾಣಾ ಪೊಲೀಸರು ದೌಡಾಯಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Write A Comment