
ಪ್ಯಾರಿಸ್,ಜನವರಿ.10 : ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ‘ಚಾರ್ಲಿ ಹೆಬ್ದೊ’ ವಾರಪತ್ರಿಕೆ ಮತ್ತು ಸೂಪರ್ ಮಾರ್ಕೆಟ್ ಮೇಲೆ ನಡೆದ ದಾಳಿಯ ರೀತಿಯಲ್ಲೇ ಸದ್ಯದಲ್ಲಿಯೇ ಮರುದಾಳಿಗಳನ್ನು ನಡೆಸುವುದಾಗಿ ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಫ್ರಾನ್ಸ್ ಸರ್ಕಾರಕ್ಕೆ ಬೆದರಿಕೆ ಒಡ್ಡಿದೆ ಎಂದು ತಿಳಿದು ಬಂದಿದೆ.
ಇಬ್ಬರು ಶಂಕಿತ ಉಗ್ರರು ಸಹೋದರರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಹೆಸರು ಸೈಯದ್ ಕೌಚಿ ಮತ್ತು ಚೆರಿಫ್ ಕೌಚಿ, ಇಬ್ಬರೂ 30ರಿಂದ 35 ವರ್ಷ ವಯಸ್ಸಿನವರು ಎಂದು ಹೇಳಿದ್ದಾರೆ. ಪ್ಯಾರಿಸ್‌ನಲ್ಲಿಯೇ ಹುಟ್ಟಿ ಬೆಳೆದ ಮುಸ್ಲಿಂ ಮೂಲಭೂತವಾದಿಗಳು ಈ ಹತ್ಯಾಕಾಂಡ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಮೂರನೇ ಶಂಕಿತನ ಹೆಸರು ಹಮಿದ್ ಮೌರಾದ್ (18). ಈತ ಪೊಲೀಸರಿಗೆ ಶರಣಾಗಿದ್ದಾನೆ. ತಾನಾಗಿಯೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವಾದಿ ಮಹಮ್ಮದ್ ವಿರುದ್ಧ ವ್ಯಂಗ್ಯಚಿತ್ರ ಪ್ರಕಟಿಸಿದ ಕಾರಣಕ್ಕೆ ಸಹೋದರರಿಬ್ಬರು ಪತ್ರಿಕಾ ಕಚೇರಿಯಲ್ಲಿ ನುಗ್ಗಿ ರಕ್ತದ ಹೊಳೆ ಹರಿಸಿದ್ದರು.