ಕನ್ನಡ ವಾರ್ತೆಗಳು

ಚೋರಾಡಿಯಲ್ಲಿ ಚಿರತೆ ಕಾಟ; ಆತಂಕದಲ್ಲಿ ಸ್ಥಳೀಯ ಜನರು

Pinterest LinkedIn Tumblr

cheeta

 

(ಸಾಂದರ್ಭಿಕ ಚಿತ್ರ)

ಕುಂದಾಪುರ:  ತಾಲೂಕಿನ ಚೋರಾಡಿ ಕಳೆದ ಹತ್ತು ದಿನಗಳಿಂದ ಚಿರತೆ ಕಾಟ ಹೆಚ್ಚುತ್ತಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ವಾರದ ಹಿಂದೆ ಸ್ಥಳೀಯ ಮನೆಯೊಂದರ ಹಸುವನ್ನು ರಾತ್ರಿವೇಳೆ ಹಟ್ಟಿಯಿಂದಲೇ ಕದ್ದೊಯ್ದು ತಿಂದ ಘಟನೆ ನಡೆದಿದೆ.

ಅಲ್ಲದೇ ಎರಡು ದಿನಗಳ ಹಿಂದೆ ನಾಯಿಯೊಂದನ್ನೂ ಅಪಹರಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಸೋಮವಾರ ಸಂಜೆ ವೇಳೆಯಲ್ಲಿ ಕೆಲವರಿಗೆ ಚಿರತೆ ಗೋಚರಿಸಿದ್ದು, ಹಗಲಲ್ಲಿಯೂ ಊರಿಗೆ ಬರುತ್ತಿರುವ ಚಿರತೆಯ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

Write A Comment