ಕರ್ನಾಟಕ

ಉತ್ತರ ಪತ್ರಿಕೆ ಬಯಲು: ಬೃಹತ್ ಜಾಲದ ಶಂಕೆ

Pinterest LinkedIn Tumblr

pvec24nov14-klb10

ಕಲಬುರ್ಗಿ: ಪೊಲೀಸ್‌ ಕಾನ್‌ಸ್ಟೆಬಲ್‌ ನೇಮ­ಕಾತಿಯ ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆ ಬಯಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಕಾನ್‌ಸ್ಟೆಬಲ್ ಸೇರಿದಂತೆ ಮತ್ತೆ ಎಂಟು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.

ಹಣಮಂತ ಸಿಂಗಿ, ಹಣಮಂತ ಎಸ್.ಸಾಹು, ಸುರೇಶ ಮಾಳಗಿ, ಭೀಮಾಶಂಕರ ನಾಟಿಕಾರ, ರಾಜ­ಕುಮಾರ ಚವಾಣ್‌, ಮೌಲಾಲಿ, ರಂಗಪ್ಪ ಹಾಗೂ ಬಸವರಾಜ ವಡ್ಡರ ಬಂಧಿತರು. ಈ ಪೈಕಿ ಮೌಲಾಲಿ ಬೆಂಗಳೂರಿನ ಕೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದವರು ಕಲಬುರ್ಗಿ ಜಿಲ್ಲೆಯವರು.

ಬಂಧಿತರನ್ನು ಜಿಲ್ಲಾ ಆಸ್ಪತ್ರೆಗೆ ಕರೆ­ದೊಯ್ದು ಆರೋಗ್ಯ ತಪಾಸಣೆ ಮಾಡಿಸಿ, ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

‘ಇದುವರೆಗೆ 11 ಆರೋಪಿಗಳನ್ನು ಬಂಧಿಸಲಾಗಿದೆ. ಈ ಜಾಲ ಇನ್ನೂ ದೊಡ್ಡದಿರುವ ಶಂಕೆ ಇದೆ. ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಉತ್ತರ ಪತ್ರಿಕೆ ಬಯಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ.18 ರಂದು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

Write A Comment