ಕನ್ನಡ ವಾರ್ತೆಗಳು

ಲೋಕಾಯುಕ್ತ ನ್ಯಾ.ವೈ.ಭಾಸ್ಕರ ರಾವ್ ಅವರಿಂದ ಮಂಗಳೂರಿನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ

Pinterest LinkedIn Tumblr

Lokayukt_Meet_Pics_1

ಮಂಗಳೂರು,ನ.22:ಲೋಕಾಯುಕ್ತ ನ್ಯಾ.ವೈ.ಭಾಸ್ಕರ ರಾವ್ ಶುಕ್ರವಾರ ದ.ಕ.ಜಿ.ಪಂ. ಸಭಾಂಗಣದಲ್ಲಿ ಸಾರ್ವ ಜನಿಕರ ಅಹವಾಲು ಸ್ವೀಕರಿಸಿದರಲ್ಲದೆ, ದೂರುಗಳ ವಿಚಾರಣೆ ಹಾಗೂ ವಿಲೇವಾರಿ ನಡೆಸಿದರು.

Lokayukt_Meet_Pics_3

ಅಕ್ರಮ ವೈನ್ ಶಾಪ್ ಮುಚ್ಚಿಸಿ, ದೇವಸ್ಥಾನದ ಹಣ ದುರುಪಯೋಗ ತಡೆಯಿರಿ, ಅಕ್ರಮ ಕಟ್ಟಡ ನಿರ್ಮಾ ಣಕ್ಕೆ ಕಡಿವಾಣ ಹಾಕಿ, ಬಸವ ಯೋಜನೆ ಯಡಿ ಮನೆಗೆ ಹಣ ಒದಗಿಸಿ, ಬಡವರಿಗೆ ನಿವೇಶನ ನೀಡಿ ಇತ್ಯಾದಿ ಹಲವು ದೂರು ಗಳು ಲೋಕಾಯುಕ್ತರ ಮುಂದೆ ಬಂತು.

Lokayukt_Meet_Pics_2

ಪೊರ್ಕೋಡಿಯ ಅಕ್ರಮ ವೈನ್ ಶಾಪ್ ಬಂದ್ ಮಾಡಬೇಕು. ಈ ಬಗ್ಗೆ ಗ್ರಾಮ ಪಂಚಾಯತ್‌ನಲ್ಲೂ ನಿರ್ಣಯ ಕೈಗೊಳ್ಳಲಾಗಿದೆ ಎಂದು ನಳಿನಿ ಜಿ.ಶೆಟ್ಟಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಲೋಕಾಯುಕ್ತರು ತಿಂಗಳೊಳಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Lokayukt_Meet_Pics_6

ಕೋಟೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನವಿಲ್ಲದವರಿಗೆ ಜಮೀನು ನೀಡುವ ಬದಲು ಜಾಗವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಕೃಷ್ಣ ಶೆಟ್ಟಿಯ ಆರೋಪಕ್ಕೆ ಪ್ರತಿಕ್ರಿಯಿ ಸಿದ ಲೋಕಾಯುಕ್ತರು 2 ತಿಂಗಳೊಳಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಜಿ.ಪಂ.ಸಿಇಒರಿಗೆ ಸೂಚಿಸಿದರು.

Lokayukt_Meet_Pics_4

ನಗರದ ಹಲವು ಅಕ್ರಮ ಕಟ್ಟಡದ ಕುರಿತು ಹನುಮಂತ್ ಕಾಮತ್ ಗಮನ ಸೆಳೆದಾಗ ಪ್ರತಿಕ್ರಿಯೆ ನೀಡಿದ ಲೋಕಾ ಯುಕ್ತರು, ಡಿ.11ರಂದು ಮಹಾನಗರ ಪಾಲಿಕೆ ಆಯುಕ್ತರು ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಿದರು. ಲೋಕಾಯುಕ್ತದಲ್ಲಿರುವ ಅಧಿಕಾರಿ ಗಳು ಕೂಡ ತಪ್ಪುಗಳನ್ನು ಮಾಡುವ ಕಾರಣ ಪ್ರಕರಣ ಸಾಬೀತಾಗುತ್ತಿಲ್ಲ ಎಂದು ಹನುಮಂತ ಕಾಮತ್ ದೂರಿದರು. ಈ ಬಗ್ಗೆ ಸೂಕ್ತ ಮಾಹಿತಿ ನೀಡಿದರೆ ಕ್ರಮ ಜರಗಿಸುವೆ ಎಂದು ಲೋಕಾಯುಕ್ತ ನ್ಯಾ.ವೈ.ಭಾಸ್ಕರ ರಾವ್ ಭರವಸೆ ನೀಡಿದರು.

Lokayukt_Meet_Pics_5 Lokayukt_Meet_Pics_7

ಈ ಸಂದರ್ಭ ಜಿ.ಪಂ.ಸಿಇಒ ತುಳಸಿ ಮದ್ದಿನೇನಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಲೋಕಾಯುಕ್ತ ರಿಜಿಸ್ಟ್ರಾರ್ ಎಚ್. ಆರ್. ದೇಶಪಾಂಡೆ ಉಪಸ್ಥಿತರಿದ್ದರು.

Write A Comment