
ದುಬೈ, ನ.15: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಅಖಿಲ ಭಾರತ ತುಳು ಒಕ್ಕೂಟ ಜಂಟಿ ಆಶ್ರಯದಲ್ಲಿ ಡಿಸೆಂಬರ್ 12, 13 ಮತ್ತು 14ರಂದು ಮಂಗಳೂರಿನ ಸಮೀಪ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಅಂಗಳದಲ್ಲಿ ನಡೆಯಲಿದೆ.
ಪೂರ್ವಭಾವಿ ತಯಾರಿಯ ಅಂಗವಾಗಿ ನವೆಂಬರ್ 14ರ ಶುಕ್ರವಾರ ಪೂರ್ವಾಹ್ನ ದುಬೈ ಪ್ರೆಸಿಡೆಂಟ್ ಹೊಟೇಲ್ ಸಭಾಂಗಣದಲ್ಲಿ ಕೊಲ್ಲಿನಾಡಿನಲ್ಲಿ ನೆಲೆಸಿರುವ ತುಳುವರ ಸಮ್ಮುಖದಲ್ಲಿ ವಿಶ್ವ ತುಳುವೆರೆ ಪರ್ಬದ ಸಭೆಯನ್ನು ಆಯೋಜಿಸಲಾಗಿತ್ತು.
ವಿಶ್ವ ತುಳುವೆರೆ ಪರ್ಬದ ಕಾರ್ಯಾಧ್ಯಕ್ಷರಾದ ಧರ್ಮಪಾಲ ಯು. ದೇವಾಡಿಗ ನೇತೃತ್ವದಲ್ಲಿ ಶ್ರೀಜಯಕೃಷ್ಣ ಪ್ರೇಮಿ ಪರಿಸರ ಸಮಿತಿಯ ಸ್ಥಾಪಕಾಧ್ಯಕ್ಷ ಜಯಕೃಷ್ಣ ಶೆಟ್ಟಿ, ಮುಂಬೈ ಬಿಲ್ಲವರ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ರೀ ಎಲ್.ವಿ.ಅಮೀನ್, ಕೊಂಕಣಿ ಮಹಾರಾಷ್ಟ್ರ ಘಟಕದ ಸಂಚಾಲಕ ಪೆಲಿಕ್ಸ್ ಡಿಸೋಜ, ಖ್ಯಾತ ವಾಸ್ತುತಜ್ಞ ಅಶೋಕ್ ಪುರೋಹಿತ್, ಮಹಾರಾಷ್ಟ್ರ ಸಾಸಂಸ್ಕೃತಿಕ ಸಮಿತಿಯ ಸಂಘಟಕ ಕರ್ನೂರು ಮೋಹನ್ ರೈಯವರ ತಂಡ ಮಂಗಳೂರಿನಿಂದ ಆಗಮಿಸಿ ಯುಎಇಯ ಪ್ರಮುಖ ಕರ್ನಾಟಕ ಪರ ಸಂಘಟನೆಯ ಮುಖ್ಯಸ್ಥರ ಸಮ್ಮುಖದಲ್ಲಿ ನಡೆಸಿಕೊಟ್ಟರು.















ವೇದಿಕೆಯಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ ಶೆಟ್ಟಿ, ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಗಿರೀಶ್ ಶೆಟ್ಟಿ, ದೇವಾಡಿದ ಸಂಘ ದುಬೈಯ ಅಧ್ಯಕ್ಷ ಹರೀಶ್ ಶೇರಿಗಾರ್, ಮುಂಬೈ ದೇವಾಡಿಗ ಸಂಘದ ಮೋಹನ್ದಾಸ್ ಹಾಗೂ ದುಬೈ ಪ್ರೆಸಿಡೆಂಟ್ ಹೊಟೇಲ್ನ ವ್ಯವಸ್ಥಾಪಕ ನಿರ್ದೇಶಕ ಕರುಣಾಕರ ಶೆಟ್ಟಿ ಅತಿಥಿಗಳೊಂದಿಗೆ ಸಭೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟರು.
ಕರ್ನೂರು ಮೋಹನ್ ರೈ ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಂಗಳೂರಿನಲ್ಲಿ ವಿಶ್ವ ತುಳುವೆರೆ ಪರ್ಬದ ಕಚೇರಿಯ ಉದ್ಘಾಟನೆಯ ಸಂದರ್ಭದಲ್ಲಿ ಧರ್ಮಸ್ಥಳದ ಪೂಜ್ಯ ಡಾ.ಡಿ.ವೀರೇಂದ್ರ ಹೆಗಡೆಯವರ ತುಳು ಸಮ್ಮೇಳನದ ಧ್ಯೇಯೋದ್ದೇಶಗಳ ಬಗ್ಗೆ ನೀಡಿದ ವಿವರಣೆಯನ್ನು ಪರದೆಯ ಮೇಲೆ ಪ್ರದರ್ಶಿಸಲಾಯಿತು.















ಧರ್ಮಪಾಲ ದೇವಾಡಿಗರು ಪ್ರಾಸ್ತಾವಿಕ ಭಾಷಣದ ಮೂಲಕ ಕೊಲ್ಲಿನಾಡಿನ ಸಮಸ್ತ ತುಳುವರಿಗೆ ಶುಭಹಾರೈಸಿ, ಕೊಲ್ಲಿನಾಡಿನ ತುಳುವರು ತಮ್ಮ ಪೂರ್ಣ ಸಹಕಾರ ಬೆಂಬಲ ಹಾಗೂ ಭಾಗವಹಿಸುವಂತೆ ಆಮಂತ್ರಣ ನೀಡಿದರು.















ಸಭೆಯಲ್ಲಿ ಭಾಗವಹಿಸಿದ ಕೊಲ್ಲಿನಾಡಿನ ಸಂಘ-ಸಂಸ್ಥೆಗಳು
ಯುಎಇ ತುಳುಕೂಟ, ನಮ ತುಳುವೆರ್ ಯುಎಇ, ಯುಎಇ ಬಂಟ್ಸ್, ಮಂಗಳೂರು ಕೊಂಕಣ್ಸ್, ಬಿಲ್ಲವಾಸ್ ದುಬೈ, ಬಿಲ್ಲವರ ಬಳಗ, ಮೊಗವೀರ್ಸ್ ಯುಎಇ, ಅಬುಧಾಬಿ ಕರ್ನಾಟಕ ಸಂಘ, ಕರ್ನಾಟಕ ಸಂಘ ದುಬೈ, ಕರ್ನಾಟಕ ಸಂಘ ಶಾರ್ಜಾ, ಪದ್ಮಶಾಲಿ ಸಮುದಾಯ ಯುಎಇ, ದೇವಾಡಿಗ ಸಂಘ ಯುಎಇ, ಕುಂದಾಪುರ ದೇವಾಡಿಗ ಸಂಘ, ಬ್ರಾಹ್ಮಣ ಸಂಘ ಯುಎಇ, ಬ್ಯಾರೀಸ್ ಕಲ್ಪರಲ್ ಫೋರಂ ಯುಎಇ, ಸಾಯಿಬಾನ್ ಸಂಘ, ವಿಶ್ವಕರ್ಮ ಸೇವಾ ಸಮಿತಿ ಯುಎಇ, ಗಮ್ಮತ್ ಕಲಾವಿದರು, ಧ್ವನಿ ಪ್ರತಿಷ್ಠಾನ, ಯಕ್ಷಮಿತ್ರರು, ಯಕ್ಷಕಲಾರಂಗ, ವರಮಹಾಲಕ್ಷ್ಮಿ ಸೇವಾ ಸಮಿತಿ, ಕುಲಾಲ ಸಂಘ, ರೇಡಿಯೋ ಸ್ಪೈಸ್, ಗಾಣಿಗ ಸಮಾಜ ಯುಎಇ.












ಸಂಘಟನೆಯ ಮುಖ್ಯಸ್ಥರು, ಪದಾಧಿಕಾರಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ಕರ್ನೂರು ಮೋಹನ್ ರೈಯವರು ವಂದನಾರ್ಪಣೆ ಸಲ್ಲಿಸಿದರು. ಪ್ರೆಸಿಡೆಂಟ್ ಹೊಟೇಲ್ನ ಮುಖ್ಯಸ್ಥರಾದ ಕರುಣಾಕರ್ ಶೆಟ್ಟಿಯವರು ಸಭೆಯ ಪೂರ್ಣ ವ್ಯವಸ್ಥೆ, ಭೋಜನಾಕೂಟವನ್ನು ಏರ್ಪಡಿಸಿದ್ದರು.
ಬಿ.ಕೆ.ಗಣೇಶ್ ರೈ, ಯುಎಇ
Photography by : Ashok Belman
2 Comments
Illustrations published suggests that you had an excellent function with very constructive programs. I wish all success in your future endeavors.
wish all success for VISHWA TULUVERE PARBA.