ರಾಷ್ಟ್ರೀಯ

ಜೆ ಏನ್ ಯು ವಿವಿ ಪಿಎಚ್‌ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ

Pinterest LinkedIn Tumblr

Rape

ನವದೆಹಲಿ: ದಿನದಿಂದ ದಿನಕ್ಕೆ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಗರೀಕರ ಸಮಾಜವೆ ತಲೆ ತಗ್ಗುವಂತೆ ಆಗಿದೆ. ಪ್ರತಿಷ್ಠಿತ ಜವರಹರ ಲಾಲ್ ನೆಹರು ವಿಶ್ವವಿದ್ಯಾಲಯದ ಪಿಎಡ್ದಿ ವಿದ್ಯಾರ್ಥಿನಿಗೆ, ಪಿಎಚ್‌ಡಿ ಪದವೀದರನೊಬ್ಬ ಪದೇ ಪದೇ ಲೈಂಗಿಕ ಕಿರುಕುಳು ನೀಡುತ್ತಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಕಡಿವಾಣ ಹಾಕಲು, ಸರ್ಕಾರ ಮತ್ತಷ್ಟು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಬೇಕೆಂದು ಅನೇಕ ಸಂಘ ಸಂಸ್ಥೆಗಳು ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಮತ್ತೆ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ.

ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರತಿಷ್ಠಿತ ವಿದ್ಯಾಲಯವಾಗಿರುವ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿಯೇ ಲೈಂಗಿಕ ಕಿರುಕುಳಕ್ಕೆ ಬಲಿಯಾಗಿರುವ ಯುವತಿ.

ಪಿಎಚ್‌ಡಿ ಪದವೀದರನಾಗಿರುವ ಯುವಕ ಇತ್ತೀಚೆಗಷ್ಟೆ ದೆಹಲಿಯ ಮುನಿರಿಕಾ ಪ್ರದೇಶದಕ್ಕೆ ಸ್ಥಳಾಂತರಗೊಂಡಿದ್ದನು. ಈ ಮಧ್ಯೆ ಸಂಶೋಧನಾ ವಿದ್ಯಾರ್ಥಿನಿಯು ನೆರೆಯ ಹಾಸ್ಟೆಲ್‌ವೊಂದರಲ್ಲಿ ವಾಸಗಿದ್ದಳು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಯುವಕನ ಸ್ನೇಹ ಬೆಳೆಸಿದ್ದಳು ಎನ್ನಲಾಗಿದೆ.

ಪದೇ ಪದೇ ಯುವಕ ವಿದ್ಯಾರ್ಥಿನಿಯನ್ನು ಕಾಣಲು ಹಾಸ್ಟೆಲ್‌ಗೆ ಬರುತ್ತಿದ್ದ. ಮುಂದೆ ಇವರಿಬ್ಬರ ಸ್ನೇಹ ಪ್ರೀತಿಯಾಗಿ ಮುರ್ಪಟ್ಟಿತು. ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ಯುವತಿ ವಿವರಿಸಿದಳು. ಅಲ್ಲದೆ ತನ್ನ ಫ್ಲಾಟ್‌ಗೆ ಕರೆಸಿಕೊಳ್ಳುತ್ತಿದ್ದನಲ್ಲದೆ ಯುವಕ ಆಕೆಯ ಮೇಲೆ ಅತ್ಯಾಚಾರ ನಡೆಸಿರುವುದಾಗಿಯು ಪೊಲೀಸರಿಗೆ ವಿವರ ನೀಡಿದ್ದಾಳೆ.

ಚಂಡಿಘಡ ಮೂಲದ ಯುವತಿ ಪಿಎಚ್‌ಡಿ ಪದವಿಗಾಗಿ ದೆಹಲಿಗೆ ಆಗಮಿಸಿದ್ದಳು, ಈ ಕುರಿತು ಪೊಲೀಸರು ಪಾಟ್ನಾ ಮೂಲದ ಯುವಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕಗೊಳಿಸಿದ್ದಾರೆ.

ನವದೆಹಲಿಯಲ್ಲಿ 2012ಕ್ಕೆ ಹೋಲಿಕೆ ಮಾಡಿದಾಗ ಕಳೆದ ವರ್ಷ ಶೇ.43.6 ರಷ್ಟು ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಮಹಿಳೆಯರ ವಿರುದ್ದ ಅಪರಾಧಗಳೇ ಹೆಚ್ಚಾಗಿವೆ. ಅದರಲ್ಲಿ ಅತ್ಯಾಚಾರ ಪ್ರಕರಣಗಳು ಕಳೆದ ರಾತ್ರಿಗೆ ಹೋಲಿಕೆ ಮಾಡಿದಾಗ 680 ರಿಂದ 1,559ಕ್ಕೆ ಏರಿಕೆಯಾಗಿದೆ. ಈ ಪ್ರಕರಣಗಳಲ್ಲಿ ಸುಮಾರು ಷೇ.96 ರಷ್ಟು ಅತ್ಯಾಚಾರ ಪ್ರಕರಣಗಳು, ಪರಿಚಿತರಿಂದಲೇ ನಡೆಯುತ್ತದೆ ಎಂದು ಪೊಲೀಸರು ವಿವರಿಸಿದ್ದಾರೆ.

Write A Comment