ಮಂಗಳೂರು: ಕಳೆದ ಮೂರು ವರ್ಷಗಳಿಂದ ಪ್ರೀತಿಸಿ ಅ.17ರಂದು ಆರ್ಯಸಮಾಜದಲ್ಲಿ ಮದುವೆಯಾದ ಅಂಬ್ಲಮೊಗರು ನಿವಾಸಿ ವಿವಿಟಾ ಮತ್ತು ರೋಶನ್ ಶೆಟ್ಟಿ ಮ್ಯಾರೇಜ್ ಬ್ರೇಕಪ್‍ಗೆ ಸುಖಾಸುಮ್ಮನೆ ನನ್ನ ಮೇಲೆ ಕೇಸ್ ದಾಖಲಿಸಲಾಗಿದೆ. ಘಟನೆಗೂ ನನಗೂ ಯಾವ ಸಂಬಂಧವೂ ಇರದಿದ್ದರೂ ಕಾವೂರು ಎಸ್‍ಐ ಅಮಾನತಿಗೆ ನನ್ನ ಮೇಲೆ ರಿವೇಂಜ್ ತೆಗೆದುಕೊಳ್ಳಲಾಗುತ್ತಿದೆ ಎಂದು ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ದೂರಿದ್ದಾರೆ.
ಅ.14ರಂದು ಮನೆಬಿಟ್ಟು ಬಂದಿದ್ದ ವಿವಿಟಾ ಸ್ವಇಚ್ಛೆಯಿಂದ ರೋಶನ್ ಜೊತೆ ತಿರುಗಾಡಿಕೊಂಡಿದ್ದರೆ ಇತ್ತ ಆಕೆಯ ಪೋಷಕರು ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ವಿವಿಟಾ ಕೂಡಾ ರೋಶನ್‍ಗೆ ತನ್ನನ್ನು ಶೀಘ್ರದಲ್ಲಿ ಮದುವೆಯಾಗುವಂತೆ ಹಿಂದೆ ಬಿದ್ದಿದ್ದರಿಂದ ಹಿಂದೂ ಸಂಘಟನೆಯ ನೆರವಿನಿಂದ ಅ.17ರಂದು ಆರ್ಯ ಸಮಾಜದಲ್ಲಿ ಆಕೆಯ ಒಪ್ಪಿಗೆಯ ಮೇರೆಗೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ.
ಮದುವೆ ನಡೆಯುತ್ತಿರುವುದು ತಿಳಿದ ಯುವತಿ ಮನೆಯವರೂ, ಕೊಣಾಜೆ ಮತ್ತು ಕದ್ರಿ ಪೊಲೀಸರು ಆರ್ಯಸಮಾಜಕ್ಕೆ ಬಂದಿದ್ದು, ವಿವಿಟಾಳ ಪೋಷಕರು ಅತ್ತು ಕರೆದರೂ ಅವರೊಂದಿಗೆ ಯುವತಿ ಹೋಗಲು ಒಪ್ಪದಿದ್ದಾಗ ಯುವತಿಯ ಪೋಷಕರು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿಹೋಗಿದ್ದರು. ಆಗ ನಾನು ಹೆಣ್ಣು ಹೆತ್ತವರು ದುಃಖದಿಂದ ಹೀಗೆ ಹೇಳುತ್ತಾರೆ ಎಂದು ಹೇಳಿದಾಗಿ ಶೇಣವ ಅವರು ತಿಳಿಸಿದ್ದಾರೆ.
ಮದುವೆಯ ನಂತರ ಮೂರು ದಿನ ಒಟ್ಟಿಗಿದ್ದ ರೋಶನ್ ಮತ್ತು ವಿವಿಟಾ ಲಾಡ್ಜೊಂದರಲ್ಲಿ ವಾಸ ಮಾಡಿಕೊಂಡಿದ್ದರು. ಅ.19ರಂದು ತನ್ನ ಅಣ್ಣನೊಂದಿಗೆ ಮೆಸೇಜ್ ಮೂಲಕವೇ ವ್ಯವಹರಿಸಿದ ಯುವತಿ ಲಾಡ್ಜಿನ ಹೊರಗೆ ನಿಂತ ನೀಲಿ ಬಣ್ಣದ ಕಾರಿನಲ್ಲಿ ರೋಶನ್‍ನನ್ನು ಒಬ್ಬಂಟಿಯನ್ನಾಗಿ ಮಾಡಿ ತೆರಳಿದ್ದಳು.
ಪೋಷಕರ ಒತ್ತಡದಿಂದ ವಿವಿಟಾ ವಿಹಿಂಪಾ ಜಿಲ್ಲಾಧ್ಯಕ್ಷ ಸಹಿತ ತನ್ನ ಗಂಡ ರೋಶನ್, ಕುತ್ತಾರು ನಿವಾಸಿ ಪ್ರವೀಣ್, ಶರತ್ ಅಂಬ್ಲಮೊಗರು, ಗಣೇಶ್ ಕುಂಪಲ, ದಿನೇಶ್ ಕದ್ರಿ ವಿರುದ್ಧ ದೂರು ನೀಡಿದ್ದಳು. ಪೊಲೀಸರು ಆರು ಜನರ ಮೇಲೆ ಐಪಿಸಿ ಸೆಕ್ಷನ್ 143, 147, 366, 342,354,323,506, 149 ಅಡಿಯಲ್ಲಿ ಕೇಸು ದಾಖಲಿಸಿದ್ದರು. ರೋಶನ್ ತನ್ನ ಪತ್ನಿಯ ಪರಾರಿ ಬಗ್ಗೆ ದೂರು ನೀಡಲು ಹೋದರೆ ಪೊಲೀಸರು ಅದನ್ನು ಪಡೆದುಕೊಳ್ಳಲು ನಿರಾಕರಿಸಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿರುವ ಶೇಣವ ಈ ಹಿಂದೆ ಕಾವೂರು ಎಸ್‍ಐ ಅಮಾನತಿಗಾಗಿ ನಡೆದ ಹೋರಾಟದ ಮುಂಚೂಣಿ ವಹಿಸಿದ್ದ ನನ್ನ ಮೇಲೆ ಇಲ್ಲಸಲ್ಲದ ಸೆಕ್ಷನ್‍ಗಳನ್ನು ಜಡಿದು ನನ್ನ ಹೋರಾಟದ ಬಲ ಇಳಿಸಬೇಕೆಂದು ಕೆಲವರು ತೀರ್ಮಾನಿಸಿದ್ದಾರೆ. ಈ ರೀತಿಯ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನನ್ನ ಮೇಲೆ ಸುಖಾಸುಮ್ಮನೆ ಕೇಸು ದಾಖಲಿಸಿ ತೇಜೋವಧೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಶೇಣವ ಅಕ್ರೋಷ ವ್ಯಕ್ತಪಡಿಸಿದ್ದಾರೆ.

