ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊರಕೆ ಹಿಡಿದ ಅಧಿಕಾರಿಗಳಿಂದ ಸ್ವಚ್ಛತಾ ಅಭಿಯಾನ

Pinterest LinkedIn Tumblr

airport_clean_city_2

ಮಂಗಳೂರು, ಅ.3: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಇಂದು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ನಿಲ್ದಾಣದ ವಠಾರದಲ್ಲಿ ಸ್ವಚ್ಛಗೊಳಿಸುವ ಕಾರ್ಯ ನಡೆಸಿದರು. ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಜಿ.ಟಿ.ರಾಧಾಕೃಷ್ಣ ಸ್ವಚ್ಛತಾ ಅಭಿಯಾನದ ಪ್ರಮಾಣ ವಚನವನ್ನು ಬೋಧಿಸಿದರು.

airport_clean_city_4airport_clean_city_3a

 ಮಹಾತ್ಮಾ ಗಾಂಧಿಯ ಜನ್ಮದಿನದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯ ಸ್ವರಾಜ್ಯದೊಂದಿಗಿನ ಸ್ವಚ್ಛತೆಯ ಕನಸು ನನಸಾಗಲು ನಿರಂತರವಾಗಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಬದ್ದನಾಗಿರುತ್ತೇನೆ ಎಂಬ ಪ್ರಮಾಣ ವಚನವನ್ನು ಬೋಧಿಸಿದ ಬಳಿಕ ನಿರ್ದೇಶಕರು 5 ತಂಡಗಳಲ್ಲಿ ವಿಮಾನ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಸೂಚಿಸಿದರು. ಬಳಿಕ ವಿಮಾನ ನಿಲ್ದಾಣದ ಆವರಣದಲ್ಲಿ ಸಾಂಕೇತಿಕವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
airport_clean_city_5
airport_clean_city_6a
ವಿಮಾನ ನಿಲ್ದಾಣದ ವಾಹನ ನಿಲುಗಡೆಯ ಬಳಿಯ ಆವರಣದಲ್ಲಿ ನಿರ್ದೇಶಕ ಗೋಪಾಲಕೃಷ್ಣನ್ ಅವರು ಕೈಯಲ್ಲಿ ಪೊರಕೆ ಹಿಡಿದು ಇತರ ಅಧಿಕಾರಿಗಳ ಜೊತೆ ಆವರಣದ ಕಸ, ಮರದ ಎಲೆಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದರು. ನಿಲ್ದಾಣದ ಆವರಣದಲ್ಲಿ ಭದ್ರತಾ ಸಿಬ್ಬಂದಿಗಳೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಹಿಂದಿನ ದಿನ (ಬುಧವಾರ)ಕಚೇರಿಯನ್ನು ಸ್ವಚ್ಛಗೊಳಿಸಲಾಗಿತ್ತು, ಈ ದಿನ ನಿಲ್ದಾಣದ ಆವರಣದಲ್ಲಿ ಸ್ವಚ್ಛ ಮಾಡಲಾಗುವುದು ಮುಂದಿನ ದಿನಗಳಲ್ಲೂ ವಿಮಾನ ನಿಲ್ದಾಣದ ಆವರಣ ದಲ್ಲಿಯೂ ಸ್ವಚ್ಛತೆಯನ್ನು ಕಾಪಾಡಲು ಕ್ರಮ ಕೈ ಗೊಳ್ಳುವು ದಾಗಿ ರಾಧಾಕೃಷ್ಣನ್ ತಿಳಿಸಿ ದ್ದಾರೆ. ವಿಮಾನ ನಿಲ್ದಾಣ ಪ್ರಾಧಿಕಾರದ 150 ಅಧಿಕಾರಿಗಳು, ಸಿಐಎಸ್‌ಎಫ್, ಇಂಡಿಯನ್ ಏರ್‌ಲೈನ್ಸ್ ಹಾಗೂ ಇತರ ಸಂಸ್ಥೆಗಳ ಸದಸ್ಯರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.

Write A Comment