ಮಂಗಳೂರು,ಸೆಪ್ಟಂಬರ್. 18: ಮಂಗಳೂರು ಆಕಾಶವಾಣಿಯ ಹರ್ಷ ವಾರದ ಅತಿಥಿಯ 160 ನೇ ಕಾರ್ಯಕ್ರಮದಲ್ಲಿ ಸೆಪ್ಟಂಬರ್ 21ರಂದು ಬೆಳಿಗ್ಗೆ 8.50ಕ್ಕೆ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ.ಶ್ರೀ.ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಭಾಗವಹಿಸಲಿದ್ದಾರೆ. ಶ್ರೀ ಸುಬ್ರಹ್ಮಣ್ಯ ಮಠವು ಆಚಾರ್ಯ ಮಧ್ವರಿಂದ ಸ್ಥಾಪಿತವಾಗಿದೆ. 750 ವರ್ಷಗಳ ಇತಿಹಾಸ ಹೊಂದಿದೆ. ಈ ಮಠದ 40 ನೇ ಯತಿಗಳಾಗಿ ಪೀಠಾರೋಹಣ ಮಾಡಿದ ಶ್ರೀ.ವಿದ್ಯಾಪ್ರಸನ್ನ ತೀರ್ಥರು ಧಾರ್ಮಿಕ-ಸಾಮಾಜಿಕ ಕ್ಷೇತ್ರದಲ್ಲಿ ಅನುಪಮ ಸೇವೆಸಲ್ಲಿಸುವವರು.
ವೇದಾಂತ, ನ್ಯಾಯಶಾಸ್ತ್ರ, ವ್ಯಾಕರಣ ಪಂಡಿತರಾದ ಇವರು ಬೆಂಗಳೂರು ಪೂರ್ಣಪ್ರಙ್ಙ ವಿದ್ಯಾಪೀಠದಲ್ಲಿ ಸಂಸ್ಕ್ರತ ಪ್ರೊಫೆಸರಾಗಿದ್ದವರು. 18 ವರ್ಷಗಳಿಂದ ಶ್ರೀ ಸುಬ್ರಹ್ಮಣ್ಯದ ಯತಿಗಳಾಗಿ ವೇದಪಾಠ, ಬಿಳಿನೆಲೆಯಲ್ಲಿ ಕನ್ನಡ-ಇಂಗ್ಲೀಷ್ ಮಾದ್ಯಮ ಶಾಲೆ, ನಿಟ್ಟೆ ಎಜುಕೇಶನ್ ಟ್ರಸ್ಟ್ ನೆರವಿನಿಂದ ಸುಬ್ರಹ್ಮಣ್ಯದಲ್ಲಿ ಉಚಿತ ಆಸ್ಪತ್ರೆ, ರಾಜ್ಯದ ಹಲವೆಡೆ ಗೋಶಾಲೆ ನಡೆಸುತ್ತಿದ್ದಾರೆ. ಕ್ಷೇತ್ರಗಳ ಜೀರ್ಣೋದ್ದಾರ ಕಾರ್ಯದ ನಿಮಿತ್ತ ಅಗ್ರಹಾರದ ದೇವಳ, ವನದುರ್ಗ ದೇವಳ, ರಾಮನಾಥಪುರ ಪ್ರಸನ್ನ ಸುಬ್ರಹ್ಮಣ್ಯ ದೇವಳ ಪುನ ನಿರ್‍ಮಾಣ ಮಾಡಿದ್ದಾರೆ.
ಸುಬ್ರಹಣ್ಯದ ಬೃಹತ್ ಗಣಪತಿ ವಿಗ್ರಹ ಹಾಗೂ ಮುಂಬಯಿ ಮತ್ತು ಬೆಂಗಳೂರಿನಲ್ಲಿ ಎರಡು ಶಾಖೇಮಠಗಳನ್ನು ಪ್ರಾರಂಬಿಸಿದ್ದಾರೆ. ತುಮಕೂರು ವಿ.ವಿ.ನೆರವಿನಿಂದ ತಾಳೆಗರಿ ಸಂಶೋಧನಾ ಕೇಂದ್ರ, ಗ್ರಂಥಾಲಯ ನಿರ್‍ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು ಪರಿಸರದ ಬಗ್ಗೆ ವಿಶೇಷ ಪ್ರೀತಿಯನ್ನು ಜನಜಾಗೃತಿ ಮೂಡಿಸುತ್ತದ್ದಾರೆ. ತಮ್ಮ ಸಮಾಜೋದಾರ್ಮಿಕ ಕಾರ್ಯಗಳನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಮುಂದಿನವಾರ ಇತಿಹಾಸ ತಙ್ಙರಾದ ಡಾ.ಕೆ. ಜಿ ವಸಂತ ಮಾಧವ ಭಾಗವಹಿಸಲಿದ್ದಾರೆ.


