ಕರಾವಳಿ

ಕುಂದಾಪುರ | ಕೊಡಿ ಹಬ್ಬದಲ್ಲಿ ಮಹಿಳೆಯ ಚಿನ್ನದ ಕರಿಮಣಿ ಕಳವು: ಐವರು ಖತಾರ್ನಾಕ್ ಆರೋಪಿಗಳ ಬಂಧನ

Pinterest LinkedIn Tumblr

https://www.facebook.com/share/v/1CRCcBTR15/

ಕುಂದಾಪುರ: ಕೋಟೇಶ್ವರದಲ್ಲಿ ನ.24ರಂದು ನಡೆದ ಕೊಡಿ ಹಬ್ಬದ ಅನ್ನಪ್ರಸಾದ ಜನ‌ಸಂದಣಿಯಲ್ಲಿ ಮಹಿಳೆಯ 7 ಪವನ್ ತೂಕದ ಚಿನ್ನದ ಕರಿಮಣಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಜಪ್ತಿ ಸಮೀಪದ ನಿವಾಸಿ ಗೀತಾ ಎನ್ನುವರು ಪತಿಯೊಂದಿಗೆ ಔಷಧ ತರಲು ಕುಂದಾಪುರಕ್ಕೆ ಹೊರಟಿದ್ದು ಕೋಟೇಶ್ವರದಲ್ಲಿ ಕೊಡಿ ಹಬ್ಬವಿದ್ದ ಹಿನ್ನೆಲೆ ಕೋಟೇಶ್ವರ ಬೈಪಾಸ್‌‌ನಲ್ಲಿ ಬಸ್ಸ್‌  ಇಳಿದು ಕೋಟಿಲಿಂಗೇಶ್ವರದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಅನ್ನಪ್ರಸಾದ‌ದ ಸರತಿಯಲ್ಲಿ ನಿಂತಿದ್ದಾಗ‌‌ ಕಳ್ಳರು ಮಂಗಳಸೂತ್ರವನ್ನು ಕಳವುಗೈದಿದ್ದರು.

ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಕುಂದಾಪುರ ಪೊಲೀಸರು ಪ್ರಕರಣದ ಆರೋಪಿಗಳಾದ ಕೊಡಗು ಕುಶಾಲನಗರ ಸೋಮವಾರಪೇಟೆ ತಾಲೂಕಿನ ಶೈಲಜ ಬಡಾವಣೆ ನಿವಾಸಿ ಭಾಗ್ಯ(39), ಆಕೆಯ ಪತಿ ಎಸ್‌. ನಾಗರಾಜ(48), ತಮಿಳುನಾಡಿನ ತಿರುವನ್ನಾಮಲ್ಲೈ ಚೆನ್ನಾಗಂ ನಿವಾಸಿಗಳಾದ ಅಶ್ವಿನಿ ಎಲ್. ಅಲಿಯಾಸ್ ಗಾಯತ್ರಿ(25), ಕಾಮಾಚಿ(50), ತಮಿಳುನಾಡು ಕೃಷ್ಣಗಿರಿಯ ಆದಮ್ಮಾಳ್ ಅಲಿಯಾಸ್ ಆದ್ಯಾಮ್ಮ(49) ಬಂಧಿತರು. ಆರೋಪಿಗಳು ಈ ಹಿಂದೆಯೂ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯವೆಸಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿದೆ.

ಆರೋಪಿಗಳಿಂದ ಕಳವುಗೈದ ಸುಮಾರು 7 ಪವನ್ ತೂಕದ 6 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರ ಮತ್ತು  ಕಳ್ಳತನಕ್ಕೆ  ಬಳಸಿದ 3 ಲಕ್ಷ ರೂ. ಮೌಲ್ಯದ ಕಾರು, 7 ಮೊಬೈಲ್‌ ಪೋನ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಕುಂದಾಪುರ ಡಿವೈಎಸ್ಪಿ ಹೆಚ್‌.ಡಿ ಕುಲಕರ್ಣಿ ಮಾರ್ಗದರ್ಶನದಂತೆ ಕುಂದಾಪುರ ನಗರ ಠಾಣೆ ಪೊಲೀಸ್‌ ನಿರೀಕ್ಷಕ ಜಯರಾಮ್‌ ಡಿ. ಗೌಡ ನೇತೃತ್ವದಲ್ಲಿ ಪಿಎಸ್‌ಐಗಳಾದ ನಂಜಾನಾಯ್ಕ್‌ ಎನ್‌., ಪುಷ್ಪ ಹಾಗೂ ಸಿಬ್ಬಂದಿಗಳಾದ ಮೋಹನ, ಸಂತೋಷಕುಮಾರ್‌, ಮಹಾಬಲ ಶೆಟ್ಟಿಗಾರ್, ಚಂದ್ರಶೇಖರ ಅರೆಶಿರೂರು, ಘನಶ್ಯಾಮ್‌, ಸಂತೋಷ ದೇವಾಡಿಗ, ಗೌತಮ, ಲೋಹಿತ್‌, ನಾರಾಯಣ, ಪದ್ಮಾವತಿ, ರೇವತಿ, ಭಾಗೀರಥಿ, ಚಾಲಕ ಎ.ಆರ್.ಎಸ್.ಐ ರಾಜು ಭೋವಿ ಮತ್ತು ಖಾಸಿಮ್‌ ಜಮಾದಾರ್‌ ಹಾಗೂ ಆರ್‌ಡಿಸಿ ವಿಭಾಗದ ದಿನೇಶ ಮತ್ತು ನಿತೀನ್‌ ಕಾರ್ಯಚರಣೆಯಲ್ಲಿದ್ದರು.

ಸೈನ್‌ ಇನ್‌ ಸೆಕ್ಯುರಿಟಿ ಸಿ.ಸಿ ಕ್ಯಾಮೆರಾಗಳಿಂದ ಮಹತ್ವದ ಸುಳಿವು: ಕೊಡಿ ಹಬ್ಬದ ಹಿನ್ನೆಲೆಯಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನದ ಒಳಗೆ, ಹೊರಗೆ ಹಾಗೂ ರಥಬೀದಿಯ ಸಹಿತ ಆಯಕಟ್ಟಿನ ಸ್ಥಳದಲ್ಲಿ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವತಿಯಿಂದ 28 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಕರಿಮಣಿ ಸರ ಕಳವುಗೈದ ಹಾಗೂ ಆರೋಪಿಗಳು ವಾಹನದಲ್ಲಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಸೈನ್ ಇನ್ ಸೆಕ್ಯುರಿಟಿ ಸಂಸ್ಥೆ ಪೊಲೀಸರಿಗೆ ಒದಗಿಸಿದ ಮಹತ್ವದ ದಾಖಲೆಗಳು ಹಾಗೂ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಆರೋಪಿಗಳ ಚಹರೆ ಪತ್ತೆಹಚ್ಚಲು ಸಹಕಾರಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ ಕ್ಯಾಮೆರಾಗಳ ತಾಂತ್ರಿಕ ಪರಿಶೀಲನೆ ಆಧಾರದಲ್ಲಿ ಆರೋಪಿಗಳ ಬೆನ್ನುಹತ್ತಿದ ಕುಂದಾಪುರ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.