ಕುಂದಾಪುರ: ಶ್ರೀ ಕ್ಷೇತಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಿಜಿಸ್ಟರ್ ಕುಂದಾಪುರ 2 ಯೋಜನಾ ಕಚೇರಿ ವ್ಯಾಪ್ತಿಯ ಕೋಟೇಶ್ವರ ವಲಯದಲ್ಲಿ ಈ ದಿನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ 3 ತಿಂಗಳ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಸ್ವಾಗತ ಫ್ರೆಂಡ್ಸ್ ಮಾರ್ಕೋಡು ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಸ್ವಾಗತ ಫ್ರೆಂಡ್ಸ್, ಕಮಿಟಿ ಉಪಾಧ್ಯಕ್ಷರಾದ ಮಹೇಶ ಸೇರಿಗಾರ್ ಅವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಲಯದ ಮೇಲ್ವಿಚಾರಕರಾದ ರೋಹಿಣಿ ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ಮಾತುಗಳನ್ನಾಡಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕವಿತಾ ಗೌಡ ತರಬೇತಿಯ ನಿಯಮಾವಳಿಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಟೇಶ್ವರ ಎ ಒಕ್ಕೂಟದ ಅಧ್ಯಕ್ಷ ರಾಮಗೊಲ್ಲ, ಅಂಕದಕಟ್ಟೆ ಅಧ್ಯಕ್ಷೆ ಶಾಂತಗೋಪಾಲ್ ಕೃಷ್ಣ, ಸ್ವಾಗತ ಫ್ರೆಂಡ್ಸ್ ಕಮಿಟಿ ಉಪಾಧ್ಯಕ್ಷ ಮಹೇಶ್ ಶೇರಿಗಾರ್, ಟೈಲರಿಂಗ್ ಶಿಕ್ಷಕಿ ಮಮತಾ, ಮೇಲ್ವಿಚಾರಕಿ ರೋಹಿಣಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕವಿತಾ ಗೌಡ, ಸೇವಾ ಪ್ರತಿನಿಧಿಗಳಾದ ಸುಮಾ, ಜಯಂತಿ, ಇಂದಿರಾ, ಶಾಲಿನಿ, ಟೈಲರಿಂಗ್ ತರಬೇತುದಾರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸೇವಾ ಪ್ರತಿನಿಧಿ ಸುಮಾ ನಿರೂಪಿಸಿ, ಜಯಂತಿ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
Comments are closed.