ಕರಾವಳಿ

ಹಿರಿಯಡ್ಕ ಪೊಲೀಸ್ ಠಾಣೆಗೆ ನೂತನ ಠಾಣಾಧಿಕಾರಿಯಾಗಿ ತಿಮ್ಮೇಶ್ ಬಿ.ಎನ್.‌ ನೇಮಿಸಿ ಆದೇಶ

Pinterest LinkedIn Tumblr

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣೆಗೆ ನೂತನ ಠಾಣಾಧಿಕಾರಿಯಾಗಿ ತಿಮ್ಮೇಶ್ ಬಿ.ಎನ್.‌ ಅವರನ್ನು ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ.

2014 ಬ್ಯಾಚ್‌ನ ಪೊಲೀಸ್ ಉಪನಿರೀಕ್ಷಕರಾಗಿರುವ ತಿಮ್ಮೇಶ್ ಬಿ.ಎನ್. ಅವರು ಬೈಂದೂರು, ಮಲ್ಪೆ, ಕಾಪು, ಅಜೆಕಾರು ಮೊದಲಾದ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಪ್ರಸ್ತುತ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದಾರೆ.

ಪ್ರದೀಪ್ ಪೂಜಾರಿ ಪ್ರಕರಣದ ತನಿಖೆ ಹಾಗೂ ನಿರ್ವಹಣೆಯಲ್ಲಿ ಸಾಕ್ಷ್ಯಾಧಾರಿತ ಕರ್ತವ್ಯ ನಿರ್ಲಕ್ಷ್ಯ ವರದಿಯಾದ ಹಿನ್ನೆಲೆ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಪುನೀತ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಶ್ಚಿಮ ವಲಯ ಡಿಐಜಿ ಕಚೇರಿಗೆ ವರ್ಗಾಯಿಸಲಾಗಿತ್ತು. ಈ ಖಾಲಿಯಿದ್ದ ಪಿಎಸ್ಐ ಹುದ್ದೆಗೆ ತಿಮ್ಮೇಶ್ ಅವರನ್ನು ನೇಮಿಸಿ ಪ್ರಭಾರ ಐಜಿಪಿ ಆದೇಶ ನೀಡಿದ್ದಾರೆ.

 

Comments are closed.