ಕರಾವಳಿ

ಕುಂದಾಪುರ | ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ 25 ಸಾವಿರ ವೈದ್ಯಕೀಯ ನೆರವು

Pinterest LinkedIn Tumblr

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕುಂದಾಪುರ 2 ಯೋಜನ ಕಚೇರಿ ವ್ಯಾಪ್ತಿಯ ಕೋಟೇಶ್ವರ ವಲಯದ ಬೀಜಾಡಿ-ಬಿ ಕಾರ್ಯಕ್ಷೇತ್ರದ ಸ್ಫೂರ್ತಿ ತಂಡದ ಸದಸ್ಯರಾದ ಗೋವಿಂದ ಅವರ 6 ತಿಂಗಳ ಮಗುವಿಗೆ ಮೂತ್ರಕೋಶದ ಸರ್ಜರಿ ಆಗಿದ್ದು ವೈದಕೀಯ ನೆರವಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕ್ರಿಟಿಕಲ್ ಫಂಡ್ ಮನವಿಯನ್ನು ಸಲ್ಲಿಸಿದ್ದರು.

ಅದರಂತೆ ಕ್ಷೇತ್ರದಿಂದ 25 ಸಾವಿರ ರೂಪಾಯಿ ಮಂಜೂರು ಮಾಡಿದ್ದು ತಾಲೂಕಿನ ಯೋಜನಾಧಿಕಾರಿಗಳಾದ ಸುಧೀರ್ ಅವರು ಗ್ರಾಮ ಪಂಚಾಯತ್ ಸದಸ್ಯರಾದ ಆಶಾ, ಒಕ್ಕೂಟದ ಉಪಾಧ್ಯಕ್ಷದ ಪ್ರೇಮ ಹಾಗೂ ಸ್ಥಳೀಯ ಸಂಘದ ಸದಸ್ಯರುಗಳ ಸಮ್ಮುಖದಲ್ಲಿ ಫಲಾನುಭವಿ ಗೋವಿಂದ ದೇವಾಡಿಗವರಿಗೆ  ಮೊತ್ತ ವಿತರಿಸಲಾಯಿತು. ಈ ಸಂದರ್ಭ ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತ, ಸೇವಾ ಪ್ರತಿನಿಧಿ ಮಾಲತಿ, ಶೋಭಾ, ಸ್ಥಳೀಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

Comments are closed.