ಕರಾವಳಿ

ಮಕ್ಕಳ ಕಳ್ಳರಿದ್ದಾರೆಂದು ವದಂತಿ ಹರಡುತ್ತಿರುವವರಿಗೆ ಉಡುಪಿ ಎಸ್ಪಿ ಖಡಕ್ ಎಚ್ಚರಿಕೆ!

Pinterest LinkedIn Tumblr

ಉಡುಪಿ: ಮಕ್ಕಳ ಕಳ್ಳರು ಸಂಚರಿಸುತ್ತಿದ್ದಾರೆಂದು ಸುಳ್ಳು ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇಂತಹ ಆಧಾರ ರಹಿತ ವದಂತಿ ಹಬ್ಬುತ್ತಿರುವರನ್ನು ಪತ್ತೆಹಚ್ಚಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಎಚ್ಚರಿಕೆ ನೀಡಿದ್ದಾರೆ.

ಸುಳ್ಳು ಸುದ್ದಿ ಎಂದು ಎಸ್ಪಿ ಸ್ಪಷ್ಟನೆ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ಹರಿದಾಡುತ್ತಿದ್ದು ಇದು ಸುಳ್ಳು ಎಂದು ಎಸ್ಪಿ ತಿಳಿಸಿದ್ದಾರೆ.

‘ಪೋಷಕರ ಗಮನಕ್ಕೆ: ಮಕ್ಕಳ ಕಳ್ಳರು ಮುಸುಕು ಹಾಕಿಕೊಂಡು ಅಲೆವೂರು, ಬೆಳ್ಳೆ ಕುಂತಳನಗರ ವ್ಯಾಪ್ತಿಯಲ್ಲಿ ತಿರುಗುತ್ತಿದ್ದಾರೆ. ದಯವಿಟ್ಟು ಮಕ್ಕಳು ಬೆಳಿಗ್ಗೆ ರಿಕ್ಷಾ ಹತ್ತುವಾಗ ಮತ್ತು ಸಾಯಂಕಾಲ ಇಳಿಯುವಾಗ ಪೋಷಕರು ಕಡ್ಡಾಯವಾಗಿ ಇರಲೇಬೇಕು. ಮಕ್ಕಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ.ದಯಮಾಡಿ ಎಲ್ಲಾ ಪೋಷಕರು ಗಮನಹರಿಸಿ’ ಎಂಬ ಸುಳ್ಳು ವದಂತಿಯ ಪೋಸ್ಟ್ ಹರಡಿಸಿದವರ ಪತ್ತೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

Comments are closed.