ಕರಾವಳಿ

ಬ್ರಹ್ಮಾವರ | ಪತ್ರಕರ್ತ ಶೇಷಗಿರಿ ಭಟ್ ಆತ್ಮಹತ್ಯೆ

Pinterest LinkedIn Tumblr

ಬ್ರಹ್ಮಾವರ: ಬ್ರಹ್ಮಾವರದ ಹಿರಿಯ ಪತ್ರಕರ್ತ ಹಾಗೂ ಖಾಸಗಿ ಕಾಲೇಜಿನ ಉಪಪ್ರಾಂಶುಪಾಲ ಶೇಷಗಿರಿ ಭಟ್ (45) ಅವರು ಶನಿವಾರ ಬೆಳಿಗ್ಗೆ ಆ*ತ್ಮಹ*ತ್ಯೆಗೆ ಶರಣಾದ ಘಟನೆ ವರದಿಯಾಗಿದೆ.

ಪತ್ರಕರ್ತರಾಗಿದ್ದ ಶೇಷಗಿರಿ ಭಟ್ ಅವರು ಬ್ರಹ್ಮಾವರ ಕ್ರಾಸ್‌ಲ್ಯಾಂಡ್‌ ಕಾಲೇಜಿನ ಉಪಪ್ರಾಂಶುಪಾಲರಾಗಿದ್ದು ತಮ್ಮ ಆರೂರು ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ತಂದೆ,ತಾಯಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸಂತಾಪ: ಶೇಷಗಿರಿ ಭಟ್ ಅವರ ನಿಧನ ಸುದ್ದಿ ಪತ್ರಿಕಾ ವಲಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಆಘಾತ ಮೂಡಿಸಿದೆ. ಅವರ ಅಗಲಿಕೆಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುಬ್ರಮಣ್ಯ ಜಿ. ಕುರ್ಯ, ಬ್ರಹ್ಮಾವರ ಪತ್ರಕರ್ತ ಸಂಘದ ಅಧ್ಯಕ್ಷರು ಸಹಿತ  ಸಂಘದ ಸರ್ವ ಸದಸ್ಯರು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Comments are closed.