ಬ್ರಹ್ಮಾವರ: ಆಳ್ವಾಸ್ ನುಡಿಸಿರಿ ವಿರಾಸತ್ ಬ್ರಹ್ಮಾವರ ಘಟಕ ಹಾಗೂ ಬ್ರಹ್ಮಾವರ ಫೌಂಡೇಶನ್ ಆಶ್ರಯದಲ್ಲಿ ಜ.27ರಂದು ಮಂಗಳವಾರ ಸಂಜೆ ಗಂಟೆ 6.15ರಿಂದ ಗಾಂಧಿ ಮೈದಾನದ ಕೀರ್ತಿಶೇಷ ಡಾ.ಬಿ.ಬಿ. ಶೆಟ್ಟಿ ವೇದಿಕೆಯಲ್ಲಿ ಆಳ್ವಾಸ್ ಸಂಸ್ಥೆಯ 500 ವಿದ್ಯಾರ್ಥಿ ಕಲಾವಿದರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಜರಗಲಿದೆ ಎಂದು ಬ್ರಹ್ಮಾವರ ಫೌಂಡೇಶನ್ ಅಧ್ಯಕ್ಷ ಬಿ. ಗೋವಿಂದರಾಜ ಹೆಗ್ಡೆ ಅವರು ಆಶ್ರಯ ಹೊಟೇಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಉಡುಪಿ ಎಸ್.ಪಿ. ಹರಿರಾಮ್ ಶಂಕರ್ ಉದ್ಘಾಟಿಸಲಿದ್ದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಪ್ರಮುಖರಾದ ದಿನಕರ ಹೇರೂರು, ಉದಯ್ ಹೆಗ್ಡೆ, ಡಾ. ನೀಕೇತನ, ಆನಂದ ಸಿ. ಕುಂದರ್, ಆರೂರು ತಿಮ್ಮಪ್ಪ ಶೆಟ್ಟಿ, ಅಶೋಕ್ ಭಟ್ ಚಾಂತಾರು, ಬಾರಕೂರು ಶಾಂತಾರಾಮ ಶೆಟ್ಟಿ, ಬಿ. ಭುಜಂಗ ಶೆಟ್ಟಿ, ಬಿ.ಎನ್. ಶಂಕರ ಪೂಜಾರಿ, ಎಚ್. ಸುದರ್ಶನ ಹೆಗ್ಡೆ, ಗೋಕುಲದಾಸ್ ಬಾರಕೂರು, ನಿತ್ಯಾನಂದ ಶೆಟ್ಟಿ ಹಾರಾಡಿ, ಎಚ್. ಪ್ರಕಾಶ್ಚಂದ್ರ ಶೆಟ್ಟಿ, ಚಂದ್ರಶೇಖರ ನಾಯರಿ, ಕೆ. ಸುದೇಶ್ ಹೆಗ್ಡೆ, ರೆ.ಫಾ. ಡೇವಿಡ್ ಕ್ರಾಸ್ತಾ ಉಪಸ್ಥಿತರಿರುವರು. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಕ್ಷಗಾನದ ಧ್ರುವತಾರೆ ದಿ. ಕಾಳಿಂಗ ನಾವುಡರಿಗೆ ಅರ್ಪಿಸಲಾಗಿದೆ ಎಂದು ತಿಳಿಸಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಮಾತನಾಡಿ, ಸುಮಾರು 500 ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ಕಲಾಪ್ರಕಾರಗಳಾದ ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ– ಅಷ್ಪಲಕ್ಷ್ಮಿ, ಬಡಗುತಿಟ್ಟು ಯಕ್ಷಗಾನ ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲ ಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ-ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನಜ– ಹಿರಣ್ಯಾಕ್ಷ ವಧೆ ಹಾಗೂ ಬೊಂವೆ ವಿನೋದಾವಳಿ ಪ್ರದರ್ಶನಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ದಯಾನಂದ ಶೆಟ್ಟಿ ಹಾರಾಡಿ, ಮಡಾಮಕ್ಕಿ ಶಶಿಧರ ಶೆಟ್ಟಿ, ರಘುಪತಿ ಬ್ರಹ್ಮಾವರ, ಅಶೋಕ್ ಪೂಜಾರಿ ಹಾರಾಡಿ, ಗಣೇಶ್ ಶ್ರೀಯಾನ್, ವಸಂತ ಶೆಟ್ಟಿ, ಅಲ್ವಾರಿಸ್ ಡಿಸಿಲ್ವಾ, ಅಶೋಕ್ ಪೂಜಾರಿ ಹಾರಾಡಿ, ರಾಮಕೃಷ್ಣ ಉಪಸ್ಥಿತರಿದ್ದರು.
Comments are closed.