ಕರಾವಳಿ

ಕಾರ್ಕಳ | ಹಟ್ಟಿಯಲ್ಲಿ ಬೆಂಕಿ ಅವಘಡ: ಕಂಬಳದ ಕೋಣಗಳಾದ ಅಪ್ಪು-ತೋನ್ಸೆ ದಾರುಣ ಸಾವು

Pinterest LinkedIn Tumblr

ಉಡುಪಿ: ಹಟ್ಟಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಎರಡು ಕಂಬಳ ಕೋಣಗಳು ಮೃತಪಟ್ಟ ಘಟನೆ ಕಾಂತಾವರ ಗ್ರಾಮದ ಬೇಲಾಡಿ ಎಂಬಲ್ಲಿ ಶನಿವಾರ ನಸುಕಿನ ವೇಳೆ ನಡೆದಿದೆ.

ಬೇಲಾಡಿ ಬಾವ ಅಶೋಕ್ ಶೆಟ್ಟಿ ಎಂಬವರ ಹಟ್ಟಿಯಲ್ಲಿ ವಿದ್ಯುತ್‌ ಶಾರ್ಟ್ ಸಕ್ಯೂಟ್‌ನಿಂದ ಬೆಂಕಿ ಅವಘಡ ಉಂಟಾಗಿದ್ದು, ಇದರಿಂದ ಹಟ್ಟಿಯಲ್ಲಿದ್ದ ಹಲವು ಕಂಬಳ ಕೂಟಗಳಲ್ಲಿ ಬಹುಮಾನ ಗೆದ್ದ ಅಪ್ಪು ಮತ್ತು ತೋನ್ಸೆ ಎಂಬ ಕೋಣಗಳು ಮೃತಪಟ್ಟಿವೆ.

ಅಪ್ಪು ಮತ್ತು ತೋನ್ಸೆ ಕೋಣಗಳು 2022-23 ಋತುವಿನ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ತೋನ್ಸೆ ಕೋಣವು ನೇಗಿಲು ಕಿರಿಯ, ನೇಗಿಲು ಹಿರಿಯ ಹಗ್ಗ ಹಿರಿಯ, ಅಡ್ಡ ಹಲಗೆ, ಕನೆಹಲಗೆ ವಿಭಾಗದಲ್ಲಿ ಸ್ಪರ್ಧಿಸಿ ಎಲ್ಲಾ ವಿಭಾಗದಲ್ಲಿ ಪ್ರಶಸ್ತಿ ಪಡೆದ ಸಾಧನೆ ಮಾಡಿದೆ.

Comments are closed.