ಕರಾವಳಿ

ನಾನು ಯಾರ ಬಗ್ಗೆಯೂ ವೈಯುಕ್ತಿಕ ಟೀಕೆ ಮಾಡುವುದಿಲ್ಲ, ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುವೆ: ಕೆ. ಜಯಪ್ರಕಾಶ್ ಹೆಗ್ಡೆ

Pinterest LinkedIn Tumblr

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಸಮಾವೇಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸದ್ಯ ನಾನು ನಾಮಪತ್ರ ಸಲ್ಲಿಸಿದ್ದು ಇನ್ನು ಇನ್ನು ಚುನಾವಣಾ ಕೆಲಸ ಮಾಡುವುದು ಬಾಕಿ ಇದೆ. ನಾನು ಕೆಲಸ ಮಾಡುತ್ತೇನೆ ಎಂದಷ್ಠೇ ಹೇಳಬಲ್ಲೆ ಯೋಜನೆಗಳು ಏನು ಎಂದು ಹೇಳೋದು ಇದು ಕಾಲವಲ್ಲ. ಈ ಹಿಂದೆ ನಾನು 20 ತಿಂಗಳು ಸಂಸದನಾಗಿ ಕೆಲಸ ಮಾಡಿದ್ದು ಮಾತ್ರವಲ್ಲ ಸೋತಾಗಲು ಕೆಲಸ ಮಾಡಿದ್ದೇನೆ. ಸಂಸದನಾಗಿದ್ದ ವೇಳೆ ಪ್ರತಿ ಪಂಚಾಯಿತಿಗೂ ಭೇಟಿ ಕೊಟ್ಟಿದ್ದು ಪಂಚಾಯಿತಿಗಳ ಸಮಸ್ಯೆ ನನಗೆ ಅರ್ಥವಾಗುತ್ತದೆ. ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನ ಮಾಡಬೇಕು ನಾನು ಹೊಸದಾಗಿ ಜನರ ಸಂಪರ್ಕ ಮಾಡಿಕೊಳ್ಳಬೇಕೆಂದಿಲ್ಲ ನಾನು ಯಾವಾಗಲೂ ನಾನು ಜನರ ಸಂಪರ್ಕದಲ್ಲೇ ಇದ್ದೇನೆ ಎಂದರು.

ಮಲೆನಾಡು ಕರಾವಳಿ ಬಯಲು ಸೀಮೆಯ ಸಮಸ್ಯೆಗಳನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು ಪ್ರಚಾರ ನಿಮಿತ್ತ ಎರಡು ಜಿಲ್ಲೆಯ ಅಧ್ಯಕ್ಷರು ಪದಾಧಿಕಾರಿಗಳಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲು ಹೇಳಿದ್ದೇನೆ ಅವರು ಸೂಚಿಸಿದಂತೆ ತಿರುಗಾಟ ಮಾಡುತ್ತೇನೆ.

ಸಚಿವ ಕೆ ಜೆ ಜಾರ್ಜ್ ಅವರು ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ಮೋಟಮ್ಮ ಸಹಿತ ಚಿಕ್ಕಮಗಳೂರಿನ ಎಲ್ಲಾ ಶಾಸಕರು ಬಂದಿದ್ದು ಕಾರ್ಯಕರ್ತರು ಕೂಡ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದಾರೆ. ನಾವು ಗೆಲ್ಲುವುದಲ್ಲ ಕಾರ್ಯಕರ್ತರು ನಮ್ಮನ್ನು ಗೆಲ್ಲಿಸಬೇಕು ಎಂದರು.

ನಾವು ವಿಷಯಧಾರಿತ ಚರ್ಚೆಗಳಿಗೆ ಹೋಗುವುದಿಲ್ಲ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತೇವೆ. ನಾನು ಯಾರ ಬಗ್ಗೆಯೂ ವೈಯುಕ್ತಿಕ ಟೀಕೆ ಮಾಡುವುದಿಲ್ಲ. ನನ್ನ ಕಾಲದಲ್ಲಿ ಅನುಮೋದನೆ ತೆಗೆದುಕೊಂಡ ಕಾಮಗಾರಿಗಳು ಸಂಪೂರ್ಣ ಆಗಿಲ್ಲ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ಇದೆ ಸರ್ವರಿಗೆ ಬದುಕು ಸಮಪಾಲು ಸಮ ಬಾಳು ಇದು ನಮಗೆ ಪ್ರಮುಖ. ಮಂತ್ರಿಯಾಗಿ ಶಾಸಕರಾಗಿ ಕೆಲಸ ಮಾಡಿದ ಅನುಭವ ಇದ್ದು ಸಂಸದನಾಗಿ ಹಾಗೂ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷನಾಗಿ ಅನುಭವ ಪಡೆದಿದ್ದೇನೆ. ಹಿಂದುಳಿದ ವರ್ಗದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕ್ರಮ ಕೈಗೊಂಡಿದ್ದೇನೆ ಜನರ ಸಮಸ್ಯೆಗಳು ನನಗೆ ಅರ್ಥವಾಗಿದೆ ಸ್ಪಂದಿಸಬೇಕು ಅಷ್ಟೇ ಎಂದರು.

ಈ ಸಂಧರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಮಾಜಿ ಸಚಿವೆ ಮೋಟಮ್ಮ, ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಹಾಜರಿದ್ದರು

Comments are closed.