ಕುಂದಾಪುರ: ಸ್ವಾತಂತ್ರ್ಯ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಗಾಗಿ ಹಾಗೂ ನವ ಉದಾರವಾದಿ ಆರ್ಥಿಕ ನೀತಿಗಳ ವಿರುದ್ಧ ದೇಶವ್ಯಾಪಿ ರೈತರು, ಕಾರ್ಮಿಕರು, ಕೂಲಿಕಾರರ ಪ್ರಚಾರಾಂದೋಲನ ತಾಲೂಕಿನ ಸಿದ್ದಾಪುರ ಪೇಟೆಯಲ್ಲಿ ನಡೆಯಿತು.

ರೈತರು ಕಾರ್ಮಿಕರ,ಕೂಲಿಕಾರರ ಬೇಡಿಕೆಗಳನ್ನು ಆಳುವ ಸರ್ಕಾರಗಳು ಕಡೆಗಣಿಸುತ್ತಿವೆ ಕಾರ್ಮಿಕರ ಸಂಹಿತೆಗಳು ಹೊಸ ರೂಪದಲ್ಲಿ ತರುವ ಮೂಲಕ ಬಂಡವಾಳಗಾರರಿಗೆ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಪ್ರಯತ್ನ ಮಾಡುತ್ತಿದೆ.ಕೇಂದ್ರ ಸರಕಾರದ ನವ ಉದಾರವಾದಿ ಆರ್ಥಿಕ ನೀತಿಗಳು ಜನರನ್ನು ಹೈರಾಣಾಗಿಸಿದೆ ಎಂದು ಸಿಐಟಿಯು ಜಿಲ್ಲಾ ಮುಖಂಡ ಎಚ್. ನರಸಿಂಹ ಹೇಳಿದರು.
ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ. ಮಾತನಾಡಿ, ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ತೆಂಗು ಬೆಳೆಗಾರರ ಹಾಗೂ ಭತ್ತ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.ಗ್ರಾಮೀಣ ಪ್ರದೇಶದ ಭೂ ರಹಿತ ಕೂಲಿಕಾರರಿಗೆ ದುಡಿಮೆ ಪ್ರಮಾಣ ವಿಪರೀತ ಇಳಿಮುಖವಾಗಿ ಕಾರ್ಮಿಕರಾಗಿ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ ಕ್ರಷಿ ಪ್ರಧಾನ ದೇಶವಾದ ಭಾರತದಲ್ಲಿ ಕ್ರಷಿಯನ್ನು ನಾಶ ಪಡಿಸುವ ನೀತಿಗಳು ವೇಗವಾಗಿ ಜಾರಿ ಮಾಡುತ್ತಿದೆ ಜನರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಬದಲು ಜಾತಿ ಮತಗಳ ಹೆಸರಿನಲ್ಲಿ ಜನತೆಯಲ್ಲಿ ದ್ವೇಷ ತುಂಬಿಸಲಾಗುತಿದೆ ಎಂದು ಅವರು ಹೇಳಿದರು.
ದೇಶದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೇಶದ ನಿಜವಾದ ಸ್ವಾತಂತ್ರ್ಯ ದುಡಿಯುವ ವರ್ಗ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಹೋರಾಟ ಮುಂದುವರಿಸಬೇಕು ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಚಿಕ್ಕ ಮೊಗವೀರ, ಅಲೆಕ್ಸಾಂಡರ್,ರವಿ ವಿಎಂ, ರಾಘವೇಂದ್ರ ಆಚಾರಿ,ಚಂದ್ರ ಆಚಾರ್, ರತ್ನಾಕರ್ ರಾವ್ ಇದ್ದರು.
Comments are closed.