ಕರಾವಳಿ

ಉಡುಪಿ: ಕುಂದಾಪುರದ ಸಿದ್ದಾಪುರ ಆಸುಪಾಸಿನ ಪರಿಸರದಲ್ಲಿ ಸುಂಟರಗಾಳಿ ಅಬ್ಬರ: 50 ಲಕ್ಷಕ್ಕೂ ಅಧಿಕ ಹಾನಿ..?

Pinterest LinkedIn Tumblr

ಕುಂದಾಪುರ: ತಾಲೂಕಿನ ಸಿದ್ದಾಪುರ ಸಮೀಪದ ಉಳ್ಳೂರು-74 ಗ್ರಾಮದ ಮಧುರಬಾಳು, ಮತ್ಕೋಡು, ಹೊಂಡದಗದ್ದೆ, ಅರ್ಜಿಲ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ವೇಳೆಗೆ ಭಾರೀ ಸುಂಟರಗಾಳಿ ಬೀಸಿ ಅಪಾರ ಹಾನಿ ಉಂಟಾಗಿದೆ ಎಂದು ವರದಿಯಾಗಿದೆ.
ಸುಂಟರಗಾಳಿಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಅಡಿಕೆ ಮರ, ನೂರಕ್ಕೂ ಹೆಚ್ಚು ತೆಂಗು, ಬಾಳೆ, ಗೇರು, ಸಾಗುವಾನಿ, ಸೇರಿದಂತೆ ಅಪಾರ ಕೃಷಿ ಹಾನಿ. 4 ಮನೆಗಳು ಭಾಗಶ ಹಾನಿಯಾಗಿದ್ದು ಸುಮಾರು 50 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ.

ಮನೆಗಳಿಗೆ ಹಾನಿ:
ಹಳ್ಳಿ ಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬ್ಬಿನಲ್ಲೇ ಕಟ್ಟಿನಾಡಿ ಮಮತಾ ಇವರ ಮನೆ ಮೇಲೆ ಮಂಗಳವಾರ ರಾತ್ರಿ 10:00ಗೆ ಮರ ಬಿದ್ದು ಮನೆ ಸಂಪೂರ್ಣ ಹಾನಿಗೊಂಡಿದ್ದು ಮಮತಾ ಹಾಗೂ ಅವರ ಮಗಳು ಗಾಯಗೊಂಡಿದ್ದಾರೆ.

ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷೀ, ಕಂದಾಯ ನೀರಿಕ್ಷಕ ರಾಘವೇಂದ್ರ, ಗ್ರಾಮಲೆಕ್ಕಿಗ ಕಿರಣ್, ಗ್ರಾಮ ಸಹಾಯಕ ಕೃಷ್ಣ ಪೂಜಾರಿ, ಗ್ರಾಮ. ಪಂಚಾಯತ್ ಅಧ್ಯಕ್ಷ ರಾಜೇಶ್ ಹೆಬ್ಬಾರ್, ಸದಸ್ಯರಾದ ಸುಧಾಕರ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕಾಮತ್, ಅರಣ್ಯ ಇಲಾಖೆಯ ಶಿವಕುಮಾರ್, ಮುಖಂಡರಾದ ಸಂಪಿಗೇಡಿ ಸಂಜೀವ ಶೆಟ್ಟಿ, ರೋಹಿತ್ ಶೆಟ್ಟಿ ಮೊದಲಾದವರು ಭೇಟಿ ಮಾಡಿ ಪರಿಶೀಲನೆ ಮಾಡಿದರು.

Comments are closed.