ಕರಾವಳಿ

8ನೇ ಸುತ್ತು : ಗೆಲುವಿನ ಸನಿಹದಲ್ಲಿ ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌

Pinterest LinkedIn Tumblr

ಮಂಗಳೂರು : ಕರ್ನಾಟಕ ವಿಧಾನ ಸಭೆಗೆ ನಡೆದ ಚುನಾವಣೆಯ ಮತ ಏಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಮಂಗಳೂರು ನಗರ ದಕ್ಷಿಣದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರು ತಮ್ಮ ಸಮೀಪ ಸ್ಫರ್ಧಿಮಂಗಳೂರು ನಗರ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಅವರಿಗಿಂತ ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಭರ್ಜರಿ ಮುನ್ನಡೆಯನ್ನು ಸಾಧಿಸಿದ್ದಾರೆ.

ಎಂಟನೆ ಸುತ್ತಿನ ಮತ ಏಣಿಕೆ ಕಾರ್ಯ ಮುಗಿದಾಗ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರು 48772 ಮತಗಳನ್ನು ಪಡೆಯುವ ಮೂಲಕ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಅವರು27554 ಮತಗಳನ್ನು ಪಡೆಯುವ ಮೂಲಕ ಭಾರೀ ಹಿನ್ನೆಡೆ ಹೊಂದಿದ್ದಾರೆ. ವೇದವ್ಯಾಸ ಕಾಮತ್ ಅವರು ಸುಮಾರು 21223 ಮತಗಳ ಅಂತರದಲ್ಲಿ ಮನ್ನಡೆಯಲ್ಲಿದ್ದಾರೆ. ಈ ಮೂಲಕ ವೇದವ್ಯಾಸ ಕಾಮತ್ ಅವರು ಗೆಲುವಿನ ಸನಿಹ ತಲುಪಿದ್ದಾರೆ.

ಮತ ಏಣಿಕೆ ಕಾರ್ಯ ಭರದಿಂದ ಸಾಗುತ್ತಿದೆ.

ಮುಂದಿನ ಫಲಿತಾಂಶ ನಿರೀಕ್ಷಿಸಿ…

Comments are closed.