ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರ ಖಂಬದಕೋಣೆ ಸಮೀಪದ ಸೇತುವೆ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು, ಸವಾರರಿಬ್ಬರು ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ.

ಆಂಧ್ರಪ್ರದೇಶ ಮೂಲದ ಆದಿತ್ಯ ರೆಡ್ಡಿ (18), ಹಾಗೂ ಕಲ್ಲೂರು ತರುಣ್ ಕುಮಾರ ರೆಡ್ಡಿ (19) ಸಾವನ್ನಪ್ಪಿದವರು. ಇಬ್ಬರು ಮಣಿಪಾಲ ಎಂಐಟಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಇವರು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಣಿಪಾಲದಲ್ಲೆ ರೆಂಟ್ (ಬಾಡಿಗೆ) ಬೈಕ್ ಪಡೆದ ಈರ್ವರು ಮುರ್ಡೇಶ್ವರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಘಟನೆ ಸುದ್ದಿ ತಿಳಿದ ತತ್ ಕ್ಷಣ ಗಂಗೊಳ್ಳಿಯ 24×7 ಆಪತ್ಭಾಂಧವ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ನೆರವಾದರು. ಇವರಿಗೆ ಪ್ರದೀಪ್ ಖಾರ್ವಿ ಉಪ್ಪುಂದ, ಚಾಲಕ ಕೃಷ್ಣ, ನದಿಮ್ ಸಹಕರಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.