ಕರಾವಳಿ

ಆನ್ಲೈನ್ ದೋಖಾ; ಮೆಸೆಂಜರ್ ಆ್ಯಪ್‌ನಲ್ಲಿ ಪರಿಚಯವಾದಾತನಿಂದ 13 ಲಕ್ಷ ಹಣ ಕಳೆದುಕೊಂಡ ಉಡುಪಿಯ ಮಹಿಳೆ

Pinterest LinkedIn Tumblr

ಉಡುಪಿ: ಆನ್ಲೈನ್ ಮೂಲಕ ಹಣ ಕಳೆದುಕೊಂಡ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.

(ಸಾಂದರ್ಭಿಕ ಚಿತ್ರ)

ದುಬೈಯಲ್ಲಿ ವಾಸವಾಗಿರುವ ಗುಂಡಿಬೈಲು ಮೂಲದ ನಿವಾಸಿ ಕ್ಲೊಟಿಲ್ಡಾ ಡಿಕೊಸ್ತಾ (68) ಎಂಬವರು ಊರಿಗೆ ಬಂದಿದ್ದು, ಇವರಿಗೆ ಡಿ.2ರಂದು ಮೇಸೆಂಜರ್ ಮೂಲಕ ರೊಮಾನಿಯ ದೇಶದ ಇಂಗ್ಲೆಂಡ್‌ನಲ್ಲಿ ವೈದ್ಯಕೀಯ ವೃತ್ತಿ ಮಾಡಿಕೊಂಡಿರುವುದಾಗಿ ಹೇಳಿಕೊಂಡ ಫಿಲಿಪ್ ಜೇಮ್ಸ್ ಎಂಬಾತನ ಪರಿಚಯ ವಾಗಿತ್ತು. ಈತ ವಾಟ್ಸ್ ಆಪ್ ಕರೆ ಮಾಡಿ, ಮೆಸೇಜ್ ಮೂಲಕ ಮಾತನಾಡುತ್ತಿದ್ದ.

ಡಿ.20ರಂದು ಫಿಲಿಪ್ ಜೇಮ್ಸ್ ತಾನು ನವದೆಹಲಿ ವಿಮಾನ ನಿಲ್ದಾಣದಲ್ಲಿ ಇದ್ದು, ತನ್ನನ್ನು ಕಸ್ಟಮ್‌ ನವರು ಹಿಡಿದಿಟ್ಟಿದ್ದಾರೆ, ನನಗೆ ಡಾಲರ್‌ನ್ನು ಇಂಡಿಯನ್ ಕರೆನ್ಸಿಗೆ ಬದಲಾಯಿಸಲು ಆಗುವುದಿಲ್ಲ ಎಂದು ಕ್ಲೊಟಿಲ್ಡಾ ಡಿಕೋಸ್ತ ನಂಬಿಸಿದನು. ಹೀಗೆ ಮೋಸದಿಂದ ಆತ ಕ್ಲೊಟಿಲ್ಡಾ ಅವರಿಂದ ಹಂತಹಂತವಾಗಿ ಒಟ್ಟು 13,70,042 ರೂ. ಹಣವನ್ನು Lemring Hungyo ರವರ ಕೆನರಾ ಬ್ಯಾಂಕ್‌ ಖಾತೆಗೆ ಮತ್ತು Hijam Thaja Manbi Devi ರವರ ಯುಕೊ ಬ್ಯಾಂಕ್‌ ಖಾತೆಗೆ ಹಾಕಿಸಿಕೊಂಡಿದ್ದಾನೆ. ಬಳಿಕ ಯಾವುದೇ ಕರೆಗಳನ್ನು ಸ್ವೀಕರಿಸದೆ ವಂಚನೆ ಮಾಡಿದ್ದಾನೆ ಎಂದು ಮೋಸಹೋದ ಮಹಿಳೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನಿಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

 

Comments are closed.