ಕರಾವಳಿ

ಕಾಪು ಪುರಸಭೆ ಬಿಜೆಪಿ ತೆಕ್ಕೆಗೆ; ಕಾರ್ಯಕರ್ತರ ಸಂಭ್ರಮ..!

Pinterest LinkedIn Tumblr

ಉಡುಪಿ: ಪುರಸಭೆಯ 23 ವಾರ್ಡ್‌‌ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆದಿದ್ದು ಬಿಜೆಪಿ ಬಹುಮತ ಪಡೆದುಕೊಂಡಿದ್ದು, ಬಿಜೆಪಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ.

ಒಟ್ಟು ಫಲಿತಾಂಶದಲ್ಲಿ ಬಿಜೆಪಿ 12 ಸ್ಥಾನ ಪಡೆದು ಬಹುಮತ ಪಡೆದುಕೊಂಡಿದ್ದರೆ, ಕಾಂಗ್ರೆಸ್‌ 7 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಎಸ್‌ಡಿಪಿಐ 3 ಹಾಗೂ ಒಂದು ಸ್ಥಾನ ಪಡೆಯುವ ಮೂಲಕ ಜೆಡಿಎಸ್‌‌ ಖಾತೆ ತೆರೆದಿದೆ.

ಪುರಸಭಾ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ತಲಾ 23 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜೆಡಿಎಸ್‌‌ 7, ಎಸ್‌ಡಿಪಿಐ 9, ವೆಲ್ಪೇರ್‌ ಪಾರ್ಟಿ ಇಂಡಿಯಾ 2 ಹಾಗೂ ಪಕ್ಷೇತರ 3 ಮಂದಿಯೂ ಸೇರಿದಂತೆ 67 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು.

Comments are closed.