ಕರಾವಳಿ

ಮತಾಂತರ ಯತ್ನ ವಿಚಾರದಲ್ಲೇ ಕುಟುಂಬ ಬಲಿಯಾಗಿದ್ದು ದೃಢ; ಪತಿಗೆ ವಿಚ್ಛೇದನ ನೀಡಲು ಒತ್ತಾಯಿಸಿದ್ದ ನೂರ್‌‌‌‌‌‌‌‌ಜಹಾನ್‌‌ ಬಂಧನ..!

Pinterest LinkedIn Tumblr

ಮಂಗಳೂರು: ಇಬ್ಬರು ಮಕ್ಕಳ ಸಹಿತ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಪ್ರಕರಣದಲ್ಲಿ ನೂರ್ ಜಹಾನ್ ಎಂಬ ಮಹಿಳೆ ಮತಾಂತರ ಮಾಡಲು ಯತ್ನಿಸಿದ್ದು ತನಿಖೆಯಿಂದ ದೃಢವಾಗಿದ್ದು ಆಕೆಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಶನಿವಾರದಂದು ಈ ಘಟನೆ ಬಗ್ಗೆ ಮಾಹಿತಿ ನೀಡಿದ ಅವರು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ನೂರ್ ಜಹಾನ್ ಳನ್ನು ಬಂಧಿಸಲಾಗಿದೆ. ನಾಗೇಶನಿಗೆ ಡೈವೋರ್ಸ್ ಕೊಡು, ನಾನು ಮುಸ್ಲಿಂ ಹುಡುಗನ ಜತೆ ನಿನ್ನ ಮದುವೆ ಮಾಡುತ್ತೇನೆ ಎಂದು ಕೂಡ ನೂರ್ ಜಹಾನ್ ಹೇಳಿದ್ದಳು, ನೂರ್ ಜಹಾನ್ ಮುಸ್ಲಿಮರ ಮದುವೆ ಬ್ರೋಕರ್ ಆಗಿ ಕೆಲಸ ಮಾಡತ್ತಿದ್ದಳು. ಈಕೆ ಮಾತಿಗೆ ಮರುಳಾಗು ವಿಜಯಲಕ್ಷ್ಮೀ ತನ್ನ ಗಂಡ ನಾಗೇಶನಿಗೆ ಡೈವೋರ್ಸ್ ನೀಡಲು ನಿರ್ಧರಿಸಿದ್ದಳು ಎಂದು ಕಮಿಷನರ್ ತಿಳಿಸಿದರು.

ಪಾಂಡೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯ ಮೋರ್ಗನ್ಸ್‌ ಗೇಟ್‌ನ ಜೆಪ್ಪು ಮಾರ್ಕೆಟ್‌ ಬಳಿಯ ಮನೆಯಲ್ಲಿ ನಾಗೇಶ್‌ ಶಿರಗುಪ್ಪಿ (30) ವಿಜಯಲಕ್ಷ್ಮೀ(26), ಮಕ್ಕಳಾದ ಸಪ್ನಾ (8) ಮತ್ತು ಸಮರ್ಥ್ (4) ಶವ ಪತ್ತೆಯಾಗಿತ್ತು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು.

ಮೂಲತಃ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಸುನಗ ಗ್ರಾಮದ ನಿವಾಸಿಗಳಾಗಿದ್ದು, ಮಂಗಳೂರಿನಲ್ಲಿ 8 ವರ್ಷಗಳಿಂದ ವಾಸವಿದ್ದರು. ಬುಧವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿತ್ತು.

Comments are closed.