ಕರಾವಳಿ

ಬೈಂದೂರು ಸರಕಾರಿ ಆಸ್ಪತ್ರೆ ಸಮಸ್ಯೆಯನ್ನು ಶಾಸಕರು ಶೀಘ್ರ ಪರಿಹರಿಸಬೇಕು: ಮಾಜಿ‌ ಶಾಸಕ ಕೆ. ಗೋಪಾಲ ಪೂಜಾರಿ (Video)

Pinterest LinkedIn Tumblr

ಕುಂದಾಪುರ: ಸರ್ಕಾರಿ ಆಸ್ಪತ್ರೆಯನ್ನು ಅಭಿವೃದ್ದಿಪಡಿಸುವುದು ಶಾಸಕರ ಆದ್ಯ ಕರ್ತವ್ಯ. ಈ ಹಿಂದಿನ ನನ್ನ ಅವಧಿಯಲ್ಲೂ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಹಾಗೂ ಅಲ್ಲಿನ ಶುಚಿತ್ವದ ವಿಚಾರದಲ್ಲಿ ಪ್ರಯತ್ನಿಸಿದ್ದೇನೆ. ಸಾರ್ವಜನಿಕರ ದೂರುಗಳಿಗೆ ಶಾಸಕರಾದವರು ಸ್ಪಂದಿಸಬೇಕು ಎಂದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಬೈಂದೂರು ಸರಕಾರಿ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಇತ್ತೀಚೆಗೆ ನಡೆದ ಪ್ರತಿಭಟನೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ಶಾಸಕರು ಸಂಬಂಧಪಟ್ಟ ಮೇಲಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಬೇಕಿತ್ತು. ಬೈಂದೂರು ಆಸ್ಪತ್ರೆ ವಿಚಾರದಲ್ಲಿ ಶಾಸಕರ ಭೇಟಿ ಹಾಗೂ ಹೇಳಿಕೆ ಹಾಸ್ಯಾಸ್ಪದವಾಗಿದೆ.ವೈದ್ಯರು ಪ್ರಮಾಣಿಕವಾಗಿ ಸೇವೆ ಸಲ್ಲಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ವರ್ಗಾವಣೆ ಮಾಡಬೇಕು. ಶಾಸಕರು ಶೀಘ್ರ ಸಮಸ್ಯೆಗಳನ್ನು ಪರಿಹತಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕನಾದರೂ ಜನರು ಕರೆದಲ್ಲಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಪ್ರತಿಭಟನೆಯ ದಿನ ಬೆಂಗಳೂರಿನಲ್ಲಿದ್ದರಿಂದ ಭಾಗವಹಿಸಲು ಸಾಧ್ಯವಾಗಿಲ್ಲ. ಬೈಂದೂರು ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗಳ ವಿರುದ್ದ ಹೋರಾಟ ಮಾಡುವವರ ಜೊತೆ ಸದಾ ನಿಲ್ಲುವೆ ಎಂದರು.

Comments are closed.