ಬೆಂಗಳೂರು: ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ 12 ದಿನಗಳಾಗಿವೆ. ಈ ಕಾರಣಕ್ಕೆ ದೊಡ್ಮನೆ ಕುಟುಂಬ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯ ನಡೆಸುತ್ತಿದೆ. ಮಾತ್ರವಲ್ಲದೆ ಶಿವಣ್ಣ ರಕ್ತದಾನ ಮಾಡಿದ್ದಾರೆ.

ಅಪ್ಪು ಅಂತಹ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ: ಶಿವರಾಜ್ಕುಮಾರ್
ಪುನೀತ್ ಆಸೆ ಈ ರೀತಿ ನೆರವೇರಬೇಕೆಂದು ದೇವರ ಇಚ್ಛೆ ಇತ್ತು ಎಂದು ಅನಿಸುತ್ತದೆ. ಅಪ್ಪುನಂತಹ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಬಲಗೈಯಲ್ಲಿ ಮಾಡಿದ್ದು, ಎಡಗೈಗೆ ಗೊತ್ತಾಗಬಾರದು. ಅದನ್ನೇ ನಾವೆಲ್ಲರೂ ಅನುಸರಿಸಬೇಕು. ಇಂದು ಎಲ್ಲರಿಗೂ ಊಟದ ವ್ಯವಸ್ಥೆ ಆಗುತ್ತಿದೆ ಎಂದು ಅರಮನೆ ಮೈದಾನದಲ್ಲಿ ನಟ ಶಿವರಾಜ್ಕುಮಾರ್ ಹೇಳಿಕೆ ನೀಡಿದ್ದಾರೆ.
Comments are closed.