ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟ ಪುನೀತ್ ರಾಜ್ ಕುಮಾರ್ ಅವರ 12ನೇ ದಿನದ ಪುಣ್ಯ ಸ್ಮರಣೆ ಇಂದು. ಸೋಮವಾರದಂದು ಕುಟುಂಬಸ್ಥರಿಂದ 11ನೇ ದಿನದ ಕಾರ್ಯ ನಡೆದಿತ್ತು. ಇಂದು (ನ.9 ಮಂಗಳವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.

ಇಂದು ಬೆಳಗ್ಗೆ ಬೆಳಗ್ಗೆ 11.30ಕ್ಕೆ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು ಸುಮಾರು 25-30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಪ್ಪು ಅಭಿಮಾನಿಗಳಿಗೆ ವೆಜ್-ನಾನ್‍ವೆಜ್ ವ್ಯವಸ್ಥೆ ಮಾಡಲಾಗಿದೆ. ಸುಮಾರು 5 ಸಾವಿರ ಜನರಿಗೆ ಸಸ್ಯಹಾರಿ, ಉಳಿದಂತೆ ಮಾಂಸಹಾರಿ ಊಟಕ್ಕೆ ಸಿದ್ದತೆ ಮಾಡಲಾಗಿದೆ. ಒಂದೂವರೆ ಸಾವಿರ ಮಂದಿಯಿಂದ ಊಟಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದು ಇವರಲ್ಲಿ 700 ಬಾಣಸಿಗರು, ಸಹಾಯಕರು, ಕ್ಲೀನಿಂಗ್ ಕೆಲಸದವರು ಸೇರಿ 1,500 ಮಂದಿ ಅಡುಗೆ ಸಿದ್ಧತೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಬಾಳೆ ಎಲೆಯಲ್ಲಿ ಅಭಿಮಾನಿಗಳಿಗೆ ಊಟ ನೀಡಲಾಗುತ್ತದೆ.
ಸಾವಿರಾರು ಮಂದಿ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸುವ ನಿರೀಕ್ಷೆಯ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ಯಾಲೆಸ್ ಗ್ರೌಂಡ್ ಸುತ್ತ ಓರ್ವ ಡಿಸಿಪಿ, 3 ಎಸಿಪಿ, 32 ಇನ್ಸ್ ಪೆಕ್ಟರ್, 70 ಸಬ್ ಇನ್ಸ್‍ಪೆಕ್ಟರ್ ಸೇರಿ ಒಟ್ಟು 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ.
ವೆಜ್ ಮೆನು
ಸಸ್ಯಹಾರಿ ಅಡುಗೆಯಲ್ಲಿ ಮಸಾಲ ವಡೆ, ಗೀ ರೈಸ್-ಕುರ್ಮಾ, ಆಲೂ ಕಬಾಬ್, ಅಕ್ಕಿ ಪಾಯಸ, ಅನ್ನ, ತರಕಾರಿ ಸಾಂಬಾರ್, ರಸಂ ಹಾಗೂ ಮಜ್ಜಿಗೆ ಇರಲಿದೆ.
ನಾನ್ ವೆಜ್ ಮೆನು
ಗೀ ರೈಸ್, ಚಿಕನ್ ಚಾಪ್ಸ್/ ಚಿಕನ್ ಸಾರು, ಕಬಾಬ್, ಮೊಟ್ಟೆ, ಅನ್ನ-ಸಾಂಬಾರ್ ಹಾಗೂ ರಸಂ ಮಾಂಸಹಾರಿ ಊಟದಲ್ಲಿ ಇರಲಿದೆ.
Comments are closed.