ಮಂಗಳೂರು/ ಉಡುಪಿ: ಕೇರಳ, ಗೋವಾ ಮಾದರಿಯ ಸಿಆರ್ ಝಡ್ ನಿಯಮ ಕರ್ನಾಟಕದಲ್ಲೂ ಜಾರಿ ಯಾದರೆ ಪ್ರವಾಸೋದ್ಯಮಕ್ಕೆ ಅನುಕೂಲ ವಾಗಲಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಕೇರಳ, ಗೋವಾದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಸಿಆರ್ಝಡ್ ನಿಯಮ ಸರಳವಾಗಿದೆ. ಇದೇ ಮಾದರಿ ಇಲ್ಲೂ ಜಾರಿಗೊಳ್ಳಬೇಕು. ಬೀಚ್, ಯಾತ್ರಾಸ್ಥಳ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಸೂಚಿಸಲಾಗಿದೆ ಎಂದರು.
ಕರಾವಳಿ ಭಾಗದ ಮೀನುಗಾರಿಕೆ, ಬಂದರು ಮತ್ತು ವಾಣಿಜ್ಯ ಬೆಳವಣಿಗೆಗೆ ಪೂರಕವಾಗುವ ನಿರ್ಧಾರಕೈಗೊಳ್ಳುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಎನ್ಎಂಪಿಟಿ, ಕಾರವಾರ ಬಂದರು ವಿಸ್ತರಣೆಯನ್ನು ಇದರಲ್ಲಿ ಅಳವಡಿಸಲಾಗುವುದು ಎಂದರು.
ಗಡಿ ನಿರ್ಬಂಧ ಸಡಿಲಿಕೆ ಬಗ್ಗೆ…
ಕೊರೊನಾ ನಿಯಂತ್ರಣಕ್ಕಾಗಿ ಕೇರಳ, ಮಹಾರಾಷ್ಟ್ರ ಗಡಿಗಳಲ್ಲಿ ಇರುವ ಕಠಿನ ನಿಯಮಗಳನ್ನು ಸಡಿಲಿಸುವ ಬಗ್ಗೆ ದಸರಾ ಹಬ್ಬದ ಬಳಿಕ ತಜ್ಞರ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
Comments are closed.