ಮೂಡುಬಿದ್ರೆ: ಬೆಂಗಳೂರಿನ ರಾಘವೇಂದ್ರ ಕುಲಕರ್ಣಿ ಎನ್ನುವಾತ ಬೆಳುವಾಯಿಯ ಮಹಿಳೆಯೊಬ್ಬರನ್ನು ವಿವಾಹವಾಗಿದ್ದು ಬಳಿಕ ಹೆಂಡತಿಯನ್ನು ವಂಚಿಸಿ ಬೇರೊಬ್ಬ ಮಹಿಳೆಯನ್ನು ಮದುವೆಯಾದ ಆರೋಪದಲ್ಲಿ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಘವೇಂದ್ರ ಕುಲಕರ್ಣಿ ಬೆಂಗಳೂರಿನವನಾಗಿದ್ದು, ಜೂನ್ 18, 2017 ರಂದು ನನ್ನನ್ನು ಬೆಂಗಳೂರಿನ ರಾಘವೇಂದ್ರ ಮಠದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದು,ಮದುವೆಯ ಸಮಯದಲ್ಲಿ ಒಂದು ಲಕ್ಷ ರೂಪಾಯಿ ವರದಕ್ಷಿಣೆ ಕೂಡ ಪಡೆದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮದುವೆಯ ತರುವಾಯ ರಾಘವೇಂದ್ರ ತನ್ನ ಪತ್ನಿಗೆ ಆಗಾಗ್ಗೆ ದೈಹಿಕ ಹಿಂಸೆ ನೀಡುತ್ತಿದ್ದು, ಮಗು ಹುಟ್ಟಿದ ಬಳಿಕ ಮಗು ಹಾಗೂ ನನ್ನನ್ನು ಬೆಂಗಳೂರಿಗೆ ಕರೆದೊಯ್ದಿಲ್ಲ. ನನ್ನ ತಾಯಿ ನನ್ನನ್ನು ಮತ್ತು ಮಗುವನ್ನು ಬೆಂಗಳೂರಿಗೆ ಬಿಟ್ಟು ಬಂದಿದ್ದರು. ಆದರೆ ಪತಿ ಮೂರು ದಿನಗಳಲ್ಲಿ ಇಬ್ಬರನ್ನೂ ಮನೆಯಿಂದ ಮತ್ತೆ ತವರು ಮನೆಗೆ ಕಳುಹಿದ್ದಾರೆ. ಇನ್ನು ಆತನಿಗೆ ಕರೆ ಮಾಡಿದಾಗ ಆತ ತಾವರೆಕೆರೆ ಬಳಿಯ ಹೊನ್ನವ ಮಂತ್ರಾಲಯ ಮಠದಲ್ಲಿ ಗೌರಿ ಎಂಬ ಇನ್ನೊಬ್ಬ ಮಹಿಳೆಯನ್ನು ವಿವಾಹವಾದರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಆತ ನನ್ನನ್ನು ಮದುವೆಯಾಗುವ ಮೊದಲು ಕೂದ ಮತ್ತೊಬಬ್ಬರನ್ನು ವಿವಾಹವಾಗಿ ಅವರಿಗೆ ವಿಚ್ಚೇದನ ನೀಡಿದ್ದ. ಆದರೆ ಅದನ್ನು ನನಗೆ ತಿಳಿಸಿರಲಿಲ್ಲ. ಇದೀಗ ಮತ್ತೆ ಮೂರನೇ ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನಲ್ಲಿ ರಾಘವೇಂದ್ರ ಕುಲಕರ್ಣಿ, ಅವರ ಸಹೋದರ ನರಹರಿ, ಚಿಕ್ಕಪ್ಪ ನರಸಿಂಹ, ಚಿಕ್ಕಮ್ಮ ಗೀತಾ, ಸಹೋದರಿಯರಾದ ಪ್ರೇಮಲಾ, ಸವಿತಾ, ರಂಗನಾಥ್ ಮತ್ತು ಸೋದರ ಮಾವ ನಾಗನಾಥ್ ಹೆಸರು ಉಲ್ಲೇಖಿಸಲಾಗಿದೆ.
ಪಾಂಡೇಶ್ವರ ಮಹಿಳಾ ಠಾಣೆಯ ಇನ್ಸ್‌ಪೆಕ್ಟರ್ ರೇವತಿ ಇತರ ಸಿಬ್ಬಂದಿಯೊಂದಿಗೆ ಬೆಂಗಳೂರಿಗೆ ಹೋಗಿ ಆರೋಪಿಗಳನ್ನು ಹುಡುಕಿದರು. ಅವರು ನರಹರಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಇತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
Comments are closed.