ಉಡುಪಿ: ಮತಾಂತರ ಹಾಗೂ ಗೋ ಹತ್ಯೆ ವಿರುದ್ಧ ಯಾರೇ ಹೋರಾಟ ಮಾಡಿದರೂ ಅದಕ್ಕೆ ಭಾರತೀ ಜನತಾ ಪಾರ್ಟಿ ಯುವ ಮೋರ್ಚಾ ಜಿಲ್ಲಾ ಘಟಕ ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಲಿದೆ ಎಂದು ಬಿಜೆಪಿ ಜಿಲ್ಲಾ ಯುವಮೋರ್ಚಾದ ಅಧ್ಯಕ್ಷ ವಿಖ್ಯಾತ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತಾಂತರ, ಗೋ-ಹತ್ಯೆ ದೇಶದ ಸಂಸ್ಕೃತಿಗೆ ಮಾರಕ ಮಾತ್ರವಲ್ಲ ಅಶಾಂತಿಗೂ ಕಾರಣವಾಗಿದೆ. ಇದನ್ನು ಮುಂದಿಟ್ಟು ಪಕ್ಷವು ಹಲವು ಹೋರಾಟ ನಡೆಸಿದೆ. ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯಂದು ಹಿಂದುಗಳನ್ನೇ ಕೇಂದ್ರೀಕರಿಸಿ ಅನ್ಯಧರ್ಮದ ಪರವಾಗಿ ಪ್ರಾರ್ಥನಾ ಕೂಟ ಏರ್ಪಡಿಸಿರುವುದು ಎಷ್ಟರ ಮಟ್ಟಗೆ ಸರಿ ಎಂಬುವುದನ್ನು ಧರ್ಮ ಗುರುಗಳು ಅರ್ಥೈಸಿಕೊಳ್ಳಬೇಕು.
ಮತಾಂತರ ಮಾಡುವ ಮಿಷನರಿಗಳು ಹಾಗೂ ಗೋ ಕಳವು ಮಾಡಿ ಹತ್ಯೆ ಮಾಡುವವರು ಇನ್ನಷ್ಟು ತಮ್ಮ ಕೃತ್ಯಗಳಗೆ ಇತೀ ಶ್ರೀ ಹಾಡಲೇ ಬೇಕು. ಇಲ್ಲದೇ ಹೋದರೆ ಮುಂದೆ ಉಂಟಾಗುವ ಯಾವುದೇ ಅಹಿತಕರ ಘಟನೆಗೆ ಅವರೇ ಜವಾಬ್ದಾರರು ಎಂದು ವಿಖ್ಯಾತ ಶೆಟ್ಟಿ ಎಚ್ಚರಿಕೆಯನ್ನು ನೀಡಿದ್ದಾರೆ.
Comments are closed.