ಕರಾವಳಿ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು : ಬಂಟ್ವಾಳ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ 6 ಅಂಗನವಾಡಿ ಕಾರ್ಯಕರ್ತೆ ಹಾಗೂ 9 ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆಯ ವಿವರ: ಅರಳ ಗ್ರಾಮ ಪಂಚಾಯತ್‍ನ ಕಾಜಿಗುಳಿ ಅಂಗನವಾಡಿ ಕೇಂದ್ರ, ಪುರಸಭೆ ವಾರ್ಡ್ ನಂ-15 ಗ್ರಾಮ ಪಂಚಾಯತ್‍ನ ತಲಪಾಡಿ ಅಂಗನವಾಡಿ ಕೇಂದ್ರ, ಫಜೀರು ಗ್ರಾಮ ಪಂಚಾಯತ್‍ನ ಕಂಬ್ಲಪದವು ಅಂಗನವಾಡಿ ಕೇಂದ್ರ, ಮೇರಮಜಲು ಗ್ರಾಮ ಪಂಚಾಯತ್‍ನ ಕೊಡ್ಮಾಣ್-1 ಅಂಗನವಾಡಿ ಕೇಂದ್ರ, ಮೇರಮಜಲು ಗ್ರಾಮ ಪಂಚಾಯತ್‍ನ ಕೊಡ್ಮಾಣ್ 2 ಅಂಗನವಾಡಿ ಕೇಂದ್ರ, ಸಜಿಪ ಮೂಡಗ್ರಾಮ ಪಂಚಾಯತ್‍ನ ಸಜಿಪಮೂಡ ಪಂಚಾಯತ್ ಅಂಗನವಾಡಿ ಕೇಂದ್ರ.

ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಯ ವಿವರ :

ಅರಳ ಗ್ರಾಮ ಪಂಚಾಯತ್‍ನ ಕಾಜಿಗುಳಿ ಅಂಗನವಾಡಿ ಕೇಂದ್ರ, ಕಾವಳ ಪಡೂರು ಗ್ರಾಮ ಪಂಚಾಯತ್‍ನ ನಿರ್ಖಾನ ಅಂಗನವಾಡಿ ಕೇಂದ್ರ, ಚೆನ್ನೈತ್ತೋಡಿ ಗ್ರಾಮ ಪಂಚಾಯತ್‍ನ ಬಸ್ತಿಕೋಡಿ ಅಂಗನವಾಡಿ ಕೇಂದ್ರ, ಸರಪಾಡಿಗ್ರಾಮ ಪಂಚಾಯತ್‍ನ ಬಿಯಪಾದೆ ಅಂಗನವಾಡಿ ಕೇಂದ್ರ, ಮಣಿನಾಲ್ಕೂರು ಗ್ರಾಮ ಪಂಚಾಯತ್‍ನ ಕಜೆಕೋಡಿ ಅಂಗನವಾಡಿ ಕೇಂದ್ರ, ಪುರಸಭೆ ವಾರ್ಡ್ -15 ಗ್ರಾಮ ಪಂಚಾಯತ್‍ನ ತಲಪಾಡಿ ಅಂಗನವಾಡಿ ಕೇಂದ್ರ, ಅಮ್ಟಾಡಿ ಗ್ರಾಮ ಪಂಚಾಯತ್‍ನ ಕಿನ್ನಿಬೆಟ್ಟು ಅಂಗನವಾಡಿ ಕೇಂದ್ರ, ಫಜೀರು ಗ್ರಾಮ ಪಂಚಾಯತ್‍ನ ಅರ್ಕಾನ ಅಂಗನವಾಡಿ ಕೇಂದ್ರ, ಪುರಸಭೆ ವಾರ್ಡ್ -05 ಗ್ರಾಮ ಪಂಚಾಯತ್‍ನ ಹೊಸ್ಮಾರು ಅಂಗನವಾಡಿ ಕೇಂದ್ರ.

ಅರ್ಜಿ ಸಲ್ಲಿಸಲು 2021ರ ಆಗಸ್ಟ್ 7ರ ವರೆಗೆ ಅವಕಾಶವಿದೆ. ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್ ವಿಳಾಸ www.anganwadirecruit.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಕೈಕುಂಜೆ ಬಿ.ಸಿರೋಡ್ ದೂ.ಸಂ: 08255-232465 ಅನ್ನು ಸಂಪರ್ಕಿಸಬಹುದು ಎಂದು ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.