ಕರಾವಳಿ

ಪಿಯುಸಿ ನಂತರ ಮುಂದೇನು? : ನಾಳೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು : ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯು ಸಾಗರದ ಇದಿನಬ್ಬ ಫೌಂಡೇಶನ್’ನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಕರ್ನಾಟಕ ಕರಿಯರ್ ಯಾತ್ರಾ’ದ ಅಂಗವಾಗಿ ದ.ಕ. ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗೆ ‘ಪಿಯುಸಿ ನಂತರ ಮುಂದೇನು’ ಕರಿಯರ್ ಮಾರ್ಗದರ್ಶನ ಶಿಬಿರವನ್ನು ಮಂಗಳೂರಿನ ಟೀಂ ಬಿ-ಹ್ಯೂಮನ್ ಸಂಸ್ಥೆ ಆಯೋಜಿಸಿದೆ.

ಜುಲೈ 14ರಂದು ಬೆಳಿಗ್ಗೆ 10.00ಕ್ಕೆ ಝೂಮ್ (ಮೀಟಿಂಗ್ ಐಡಿ: 85029107730 ಪಾಸ್ಕೋಡ್: 687283) ಮೂಲಕ ನಡೆಯಲಿರುವ ಶಿಬಿರದಲ್ಲಿ ಕರಿಯರ್ ಪ್ಲಾನಿಂಗ್ ಮಾಡುವುದು ಯಾಕೆ? ಮತ್ತು ಹೇಗೆ?, ಅತ್ತ್ಯುತ್ತಮ ಕೋರ್ಸ್ ಆಯ್ಕೆ ಮಾಡುವುದು ಹೇಗೆ?, ಪಿಯುಸಿ ಬಳಿಕ ಲಭ್ಯವಿರುವ ಕೋರ್ಸುಗಳೇನು?, ಸರಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿಗಳಿಗಿರುವ ಯೋಜನೆಗಳೇನು? ಮತ್ತಿತರ ವಿಷಯಗಳ ಕುರಿತಂತೆ ಮಾಹಿತಿ, ಮಾರ್ಗದರ್ಶನ ನೀಡಲಾಗುವುದು.

ಪ್ರವೇಶ ಉಚಿತವಾಗಿರುವ ಶಿಬಿರದಲ್ಲಿ ರಾಜ್ಯದ ಖ್ಯಾತ ಕರಿಯರ್ ಕೌನ್ಸಿಲರ್ ಮಂಗಳೂರಿನ ಉಮರ್ ಯು.ಹೆಚ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಹೆಚ್ಚಿನ‌ ಮಾಹಿತಿಗಳಿಗಾಗಿ ಮೊ. ಸಂ. 9845054191ಗೆ ಕರೆ ಮಾಡಬಹುದು ಎಂದು ಟೀಂ ಬಿ-ಹ್ಯೂಮನ್’ನ ಸ್ಥಾಪಕಾಧ್ಯಕ್ಷ ಕೆ.ಎಂ. ಆಸಿಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.